alex Certify ಏರ್ ಪೋರ್ಸ್ ಕ್ಯಾಂಪಸ್ ನಲ್ಲಿ ಬೀದಿನಾಯಿ ದಾಳಿ: ಮಹಿಳೆ ಸಾವು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಏರ್ ಪೋರ್ಸ್ ಕ್ಯಾಂಪಸ್ ನಲ್ಲಿ ಬೀದಿನಾಯಿ ದಾಳಿ: ಮಹಿಳೆ ಸಾವು

ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಬೀದಿನಾಯಿಗಳ ಹಾವಳಿ ಹೆಚ್ಚಾಗಿದೆ. ಬೀದಿನಾಯಿ ದಾಳಿಗೆ ಮಹಿಳೆಯೊಬ್ಬರು ಸಾವನ್ನಪ್ಪಿರುವ ದಾರುಣ ಘಟನೆ ಜಾಲಹಳ್ಳಿ ಏರ್ ಫೋರ್ಸ್ ಕ್ಯಾಂಪಸ್ ನಲ್ಲಿ ನಡೆದಿದೆ.

ಕ್ಯಾಂಪಸ್ ನಲ್ಲಿ ವಾಕ್ ಮಾಡುತ್ತಿದ್ದ ವೇಳೆ ಬೀದಿನಾಯಿಗಳು 60 ವರ್ಷದ ಮಹಿಲೆ ಮೇಲೆ ಏಕಾಏಕಿ ದಾಳಿ ನಡೆಸಿವೆ. ಬೀದಿನಾಯಿಗಳ ದಾಳಿಯಿಂದ ಮಹಿಳೆಯ ಮುಖ, ಕೈ, ಕತ್ತಿನ ಹಿಂಭಾಗ ಗಂಭೀರವಾದ ಗಾಯಗೊಂಡಿತ್ತು.

ತಕ್ಷಣ ಮಹಿಳೆಯನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ಮಹಿಳೆ ಸಾವನ್ನಪ್ಪಿದ್ದಾರೆ. ಮೃತ ಮಹಿಳೆಯನ್ನು ಮೂಲದವರು ಎಂದು ತಿಳಿದುಬಂದಿದೆ. ಈ ಹಿಂದೆ ಕೂಡ ಬೀದಿನಾಯಿಗಳು ಏರ್ ಪೋರ್ಸ್ ಕ್ಯಾಂಪಸ್ ನಲ್ಲಿ ನಾಲ್ಕೈದು ಜನರ ಮೇಲೆ ದಾಳಿ ನಡೆಸಿರುವ ಪ್ರಕರಣ ನಡೆದಿತ್ತು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...