ಜಮ್ಮು ಕಾಶ್ಮೀರದಲ್ಲಿ ಡ್ರೋನ್ನಿಂದ ದಾಳಿ ನಡೆಸುವ ಆಘಾತಕಾರಿ ಸಂಚು ಬಯಲಾದ ಬಳಿಕ ಭಾರತೀಯ ಯೋಧರು ಅಲರ್ಟ್ ಆಗಿದ್ದಾರೆ. ಈ ಹೊಸ ಸವಾಲನ್ನ ಎದುರಿಸುವ ಸಲುವಾಗಿ ಭಾರತೀಯ ಸೇನೆಯು ಏರ್ ಡಿಫೆನ್ಸ್ ಕಮಾಂಡ್ನ ಸ್ಥಾಪನೆಯ ಬಗ್ಗೆ ಮಾಹಿತಿ ನೀಡಿದೆ. ಸಿಡಿಎಸ್ ಜನರಲ್ ಬಿಪಿನ್ ರಾವತ್ ಈ ಬಗ್ಗೆ ಅಧಿಕೃತ ಮಾಹಿತಿಯನ್ನ ನೀಡಿದ್ದಾರೆ.
ಸಿಡಿಎಸ್ ಜನರಲ್ ಬಿಪಿನ್ ರಾವತ್ ಈ ವಿಚಾರವಾಗಿ ಮಾತನಾಡಿದ್ದು ದೇಶದ ವಾಯು ಪ್ರದೇಶವನ್ನ ಸುರಕ್ಷಿತವಾಗಿ ಇಡೋದು ಏರ್ ಡಿಫೆನ್ಸ್ ಕಮಾಂಡ್ನ ಜವಾಬ್ದಾರಿಯಾಗಿದೆ. ಏರ್ ಡಿಫೆನ್ಸ್ ಕಮಾಂಡ್ ಎಲ್ಲಾ ಏರ್ಕ್ರಾಫ್ಟ್, ಹೆಲಿಕಾಪ್ಟರ್ ಹಾಗೂ ಡ್ರೋನ್ಗಳ ಹಾರಾಟದ ಮೇಲೆ ನಿಗಾ ಇಡುತ್ತದೆ. ಜಮ್ಮು ವಾಯು ಪ್ರದೇಶದಲ್ಲಿ ಡ್ರೋನ್ ದಾಳಿ ಬಳಿಕ ಸುರಕ್ಷತೆಯನ್ನ ಇನ್ನಷ್ಟು ಹೆಚ್ಚಿಸಲಾಗಿದೆ. ಈಗ ಪ್ರತಿಯೊಬ್ಬ ಏರ್ ಕಮಾಂಡರ್ ಕೂಡ ವಾಯು ಪ್ರದೇಶದ ಸುರಕ್ಷತೆ ಬಗ್ಗೆ ಮಾತ್ರ ಗಮನ ಹರಿಸಬೇಕಿದೆ ಎಂದು ಹೇಳಿದ್ರು.
ಹಿಂದೂ ಮಹಾಸಾಗರದಲ್ಲಿ ಅಪಾಯ ಹೆಚ್ಚಾಗುತ್ತಿದೆ. ಈ ಅಪಾಯದಿಂದ ಪಾರಾಗಲು ಮೌರಿಟೈಮ್ ಕಮಾಂಡ್ ಸ್ಥಾಪನೆ ಮಾಡಲಾಗುತ್ತೆ. ಭಾರತೀಯ ಸಮುದ್ರ ಯಾನ ಪ್ರದೇಶಗಳಲ್ಲಿ ಸುರಕ್ಷತೆಯ ಕಡೆಗೆ ಗಮನ ನೀಡೋದು ಈ ತಂಡದ ಜವಾಬ್ದಾರಿಯಾಗಿದೆ ಎಂದು ರಾವತ್ ಹೇಳಿದ್ರು.
ಹಿಂದೂ ಮಹಾಸಾಗರ ಭಾಗದಲ್ಲಿ ಅನ್ಯ ರಾಷ್ಟ್ರಗಳಿಂದ ಬೆದರಿಕೆ ಹೆಚ್ಚುತ್ತಿದೆ. ಹೀಗಾಗಿ ನಾವು ನಮ್ಮ ಸಮುದ್ರ ತೀರಗಳನ್ನ ಭದ್ರಪಡಿಸಬೇಕಿದೆ. ಸಮುದ್ರಗಳ ಸುರಕ್ಷೆಗಾಗಿ ರಾಜ್ಯ ತಟರಕ್ಷಕ್, ಭಾರತೀಯ ನೌಕಾದಳ ಸೇರಿದಂತೆ ವಿವಿಧ ವಿಭಾಗಗಳು ಅಲರ್ಟ್ ಆಗಿದೆ ಎಂದು ಮಾಹಿತಿ ನೀಡಿದ್ರು.
ನಾವು ಇನ್ನೂ 2 ಫ್ರಂಟ್ಗಳನ್ನ ನಿರ್ಮಾಣ ಮಾಡುತ್ತೇವೆ. ಒಂದು ಪಶ್ಚಿಮ ಫ್ರಂಟ್ ಹಾಗೂ ಇನ್ನೊಂದು ಉತ್ತರ ಫ್ರಂಟ್, ಉತ್ತರ ಫ್ರಂಟ್ ಬಳಿ ಸಾಕಷ್ಟು ಜವಾಬ್ದಾರಿಗಳಿವೆ. ಇದೇ ಫ್ರಂಟ್ ಜಮ್ಮು – ಕಾಶ್ಮೀರದಲ್ಲಿ ಉಗ್ರರ ವಿರುದ್ಧ ಕಾರ್ಯಾಚರಣೆ ನಡೆಸಲಿದೆ. ಹಾಗೂ ಗಡಿಯಲ್ಲಿ ಚೀನಾ ಮತ್ತು ಪಾಕ್ನ್ನೂ ಎದುರಿಸುತ್ತಿದೆ. ಇನ್ನು ಪಶ್ಚಿಮ ಫ್ರಂಟ್ ಭವಿಷ್ಯದಲ್ಲಿ ಬರುವ ಸವಾಲುಗಳನ್ನ ಗಮನದಲ್ಲಿ ಇಟ್ಟುಕೊಂಡು ಕಾರ್ಯಾಚರಣೆ ಮಾಡಲಿದೆ. ಈಗ ಪರಿಸ್ಥಿತಿ ನಿಯಂತ್ರಣದಲ್ಲಿ ಇದೆ. ಹಾಗಂತ ಪರಿಸ್ಥಿತಿ ಎಲ್ಲಾ ಬಾರಿ ಇದೇ ರೀತಿ ಇರೋದಿಲ್ಲ. ಪರಿಸ್ಥಿತಿಗೆ ತಕ್ಕಂತೆ ನಾವು ತಯಾರಿ ಮಾಡಿಕೊಳ್ಳಬೇಕು ಎಂದು ಹೇಳಿದ್ರು.