ರಾಯಚೂರು: ರಾಯಚೂರು ಜಿಲ್ಲೆ ಲಿಂಗಸುಗೂರು ತಾಲೂಕಿನ ಹಟ್ಟಿ ಚಿನ್ನದ ಗಣಿಯಲ್ಲಿ ಏರ್ ಬ್ಲಾಸ್ಟ್ ಆಗಿ ದುರಂತ ಸಂಭವಿಸಿದೆ.
ಆರು ಕಾರ್ಮಿಕರು ಗಾಯಗೊಂಡಿದ್ದು, ಓರ್ವನ ಸ್ಥಿತಿ ಗಂಭೀರವಾಗಿದೆ. ಏರ್ ಬ್ಲಾಸ್ಟ್ ಆಗಿ ಹುಲಗಣ್ಣ, ಮಲ್ಲರಾವ್, ಪ್ರಭಾಕರ್, ಮೈಕಲ್, ಮರಿಸ್ವಾಮಿ ಎಂಬುವರಿಗೆ ಗಾಯಗಳಾಗಿವೆ. ಬಸವರಾಜ್ ಸ್ಥಿತಿ ಗಂಭೀರವಾಗಿದ್ದು, ಬೆಂಗಳೂರು ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ. ನಿನ್ನೆ ಮಧ್ಯಾಹ್ನ ನಡೆದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಸುರಂಗ ಮಾರ್ಗದ ಕೆಲಸದ ವೇಳೆಯಲ್ಲಿ ಏಕಾಏಕಿ ಏರ್ ಬ್ಲಾಸ್ಟ್ ಆಗಿದೆ. ಮಣ್ಣು ಕುಸಿದು ಉಸಿರಾಟ ಸಮಸ್ಯೆ ಎದುರಾಗಿದೆ. ಕೂಡಲೇ ಆರು ಜನ ಕಾರ್ಮಿಕರನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಹಟ್ಟಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.