ಭೀವಂಡಿ: ಭಾರತ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ಠಾಕ್ರೆ ಮತ್ತು ನನ್ನದೂ ಅಲ್ಲ.ಭಾರತ ದ್ರಾವಿಡರು ಮತ್ತು ಆದಿವಾಸಿಗಳಿಗೆ ಸೇರಿದ ದೇಶವಾಗಿದೆ ಎಂದು ಎಐಎಂಐಎಂ ಪಕ್ಷದ ಸಂಸ್ಥಾಪಕ ಮತ್ತು ಸಂಸದ ಅಸಾದುದ್ದೀನ್ ಓವೈಸಿ ಹೇಳಿದ್ದಾರೆ.
ಮಹಾರಾಷ್ಟ್ರದ ಭೀವಂಡಿಯಲ್ಲಿ ಮಾತನಾಡಿದ ಅವರು, ಭಾರತಕ್ಕೆ ಮೊಘಲರ ನಂತರ ಆರ್.ಎಸ್.ಎಸ್. ಮತ್ತು ಬಿಜೆಪಿ ಬಂದಿದೆ. ಜನರು ವಲಸೆ ಬಂದ ನಂತರ ಭಾರತ ರೂಪುಗೊಂಡಿದೆ. ಆಫ್ರಿಕಾ, ಇರಾನ್, ಏಷ್ಯಾ ಜನರ ವಲಸೆಯಿಂದ ಭಾರತ ರೂಪುಗೊಂಡಿದೆ ಎಂದು ಹೇಳಿದ್ದಾರೆ.
ಈ ಭಾರತ ನನ್ನದಲ್ಲ, ಉದ್ಧವ್ ಠಾಕ್ರೆಯವರದ್ದಲ್ಲ, ಮೋದಿ ಅಥವಾ ಅಮಿತ್ ಶಾ ಅವರದ್ದಲ್ಲ, ಭಾರತ ದ್ರಾವಿಡರು ಮತ್ತು ಬುಡಕಟ್ಟು ಜನಾಂಗದವರಿಗೆ ಸೇರಿದೆ. ಭಾರತಕ್ಕೆ ಮೊಘಲರು ಬಂದಿದ್ದಾರೆ, ಆಫ್ರಿಕಾ, ಇರಾನ್, ಮಧ್ಯ ಏಷ್ಯಾ, ಪೂರ್ವ ಏಷ್ಯಾದಿಂದಲೂ ಜನ ಬಂದಿದ್ದರು, ಇವೆಲ್ಲವೂ ಸೇರಿ ಭಾರತವನ್ನು ರೂಪಿಸಲಾಯಿತು. ಆದರೆ, ಬುಡಕಟ್ಟು ಸಮುದಾಯದವರು, ದ್ರಾವಿಡರು ಇಲ್ಲಿಂದ ಬಂದವರು. ಈ ಆರ್ಯರು ನಾಲ್ಕು ಸಾವಿರ ವರ್ಷಗಳ ಹಿಂದೆ ಬಂದರು ಎಂದು ಹೇಳಿದ್ದಾರೆ.