ದೇಶದ ಪ್ರತಿಷ್ಠಿತ ವೈದ್ಯಕೀಯ ವಿಜ್ಞಾನ ಸಂಸ್ಥೆ ಮತ್ತು ಆಸ್ಪತ್ರೆಗಳಲ್ಲಿ ಒಂದಾದ ದಿಲ್ಲಿಯ ’ಏಮ್ಸ್’ ಆವರಣದಲ್ಲೇ ವೈದ್ಯೆಯೊಬ್ಬರ ಮೇಲೆ ಹಿರಿಯ ವೈದ್ಯರೇ ಅತ್ಯಾಚಾರ ಎಸಗಿದ್ದಾರೆ ಎನ್ನಲಾಗಿದೆ. ಸೆ. 26ರಂದು ನಡೆದ ಬರ್ತ್‌ಡೇ ಪಾರ್ಟಿಯಲ್ಲಿ ಹಿರಿಯ ಸಹೋದ್ಯೋಗಿಯೊಬ್ಬರು ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ವೈದ್ಯೆಯೊಬ್ಬರು ಪೊಲೀಸರಿಗೆ ದೂರು ನೀಡಿದ್ದಾರೆ. ಅ. 11ಕ್ಕೆ ಪೊಲೀಸರು ಮೆಡಿಕೊ ಲೀಗಲ್ ಕೇಸ್ ದಾಖಲಿಸಿಕೊಂಡ ನಂತರ ಅತ್ಯಾಚಾರದ ಆರೋಪ ಬೆಳಕಿಗೆ ಬಂದಿದೆ.
ದೂರು ಆಧರಿಸಿ ವಿಚಾರಣೆಗಾಗಿ ಸಂತ್ರಸ್ತೆಯ ಬಳಿಗೆ ಪೋಲೀಸರು ಏಮ್ಸ್ ಕ್ಯಾಂಪಸ್‌ಗೆ ಭೇಟಿ ಕೊಟ್ಟಿದ್ದಾರೆ. ಆಗ ಸಂತ್ರಸ್ತೆಯು ದೌರ್ಜನ್ಯದ ಬಗ್ಗೆ ವಿವರಿಸಿದ್ದಾರೆ.
BIG NEWS: JDS ನಿಂದ ಅವಕಾಶವಾದಿ ರಾಜಕಾರಣ; HDK ಆರೋಪಕ್ಕೆ ತಿರುಗೇಟು ನೀಡಿದ ಸಲೀಂ ಅಹ್ಮದ್
ಸೆ. 26ರಂದು ಜನ್ಮದಿನಾಚರಣೆ ಪಾರ್ಟಿಗಾಗಿ ಹಿರಿಯ ಸಹೋದ್ಯೋಗಿ ಆಹ್ವಾನಿಸಿದ್ದರು. ಹಾಗಾಗಿ ಸಂಜೆ ಅವರ ಕೊಠಡಿಗೆ ತೆರಳಿದೆ. ಮದ್ಯಪಾನ ಕೂಡ ಮಾಡಿಸಲಾಯಿತು. ಅಲ್ಲಿ ಇನ್ನೂ ಹಲವು ಸಹೋದ್ಯೊಗಿಗಳಿದ್ದು, ಎಲ್ಲರೂ ಮದ್ಯಪಾನ ಮಾಡಿದರು. ಕೆಲ ಗಂಟೆಗಳ ಬಳಿಕ ತಾನು ಸುಧಾರಿಸಿಕೊಳ್ಳುತ್ತಿದ್ದೆ. ಹಿರಿಯ ಸಹೋದ್ಯೋಗಿ ಬಿಟ್ಟು ಎಲ್ಲರೂ ತಮ್ಮ ಮನೆಗಳಿಗೆ ತೆರಳಿದಾಗ ಕೂಡಲೇ ಅತ್ಯಾಚಾರಕ್ಕೆ ಗುರಿಯಾದೆ ಎಂದು ವೈದ್ಯೆ ಪೊಲೀಸರಿಗೆ ವಿವರಿಸಿದ್ದಾರೆ.
ಆರೋಪಿಯ ಕುಟುಂಬಸ್ಥರು ಮನೆಯಲ್ಲಿ ಇರದೆಯೇ ಬೇರೊಂದು ಸ್ಥಳಕ್ಕೆ ಹೋಗಿದ್ದರಂತೆ. ಹಾಗಾಗಿ ಆತ ಏಮ್ಸ್ ಆಸ್ಪತ್ರೆ ಆವರಣದಲ್ಲಿನ ತನ್ನ ಕೊಠಡಿಯಲ್ಲೇ ಪಾರ್ಟಿ ಆಯೋಜಿಸಿ ಆಹ್ವಾನಿಸಿದ್ದನಂತೆ.
ಹೌಝ್ ಖಾಸ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹಿರಿಯ ಪೊಲೀಸ್ ಅಧಿಕಾರಿ ಮೇರಿ ಜೈಕೆರ್ ತನಿಖೆ ನಡೆಸುತ್ತಿದ್ದಾರೆ.