alex Certify ಗಣಿತ, ಭೌತಶಾಸ್ತ್ರವಿಲ್ಲದೇ ಇಂಜಿನಿಯರಿಂಗ್ ಪ್ರವೇಶ: ಒಂದೇ ದಿನದಲ್ಲಿ ಉಲ್ಟಾ ಹೊಡೆದ AICTE | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಗಣಿತ, ಭೌತಶಾಸ್ತ್ರವಿಲ್ಲದೇ ಇಂಜಿನಿಯರಿಂಗ್ ಪ್ರವೇಶ: ಒಂದೇ ದಿನದಲ್ಲಿ ಉಲ್ಟಾ ಹೊಡೆದ AICTE

ನವದೆಹಲಿ: ಬಿಇ ಮತ್ತು ಬಿಟೆಕ್ ಪ್ರವೇಶಕ್ಕೆ ಪಿಯುಸಿಯಲ್ಲಿ ಗಣಿತ ಮತ್ತು ಭೌತಶಾಸ್ತ್ರ ಕಡ್ಡಾಯವಾಗಿ ಓದಬೇಕಿಲ್ಲವೆಂದು ಹೇಳಿದ್ದ ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿ(AICTE) ಒಂದೇ ದಿನದಲ್ಲಿ ಉಲ್ಟಾ ಹೊಡೆದಿದೆ.

ಗಣಿತ, ಭೌತಶಾಸ್ತ್ರ ಮತ್ತು ರಸಾಯನಶಾಸ್ತ್ರಗಳನ್ನು 12 ನೇ ತರಗತಿಯಲ್ಲಿ ಓದಲೇಬೇಕು. ಇಂಜಿನಿಯರಿಂಗ್ ಕೆಲವು ಕೋರ್ಸುಗಳಿಗೆ ಪಿಯುಸಿಯಲ್ಲಿ ವಿಷಯಗಳನ್ನು ಓದದಿದ್ದರೆ ಅಡ್ಡಿಯಿಲ್ಲ. ಬಯೋಟೆಕ್ನಾಲಜಿ, ಕೃಷಿ ವಿಷಯ, ಟೆಕ್ಸ್ ಟೈಲ್ಸ್ ಆಯ್ಕೆ ಮಾಡಿಕೊಳ್ಳುವವರು ಮೂರು ವಿಷಯಗಳು ಬೇಕಿಲ್ಲ ಎಂದು ಎಐಸಿಟಿಇ ಅಧ್ಯಕ್ಷ ಅನಿಲ್ ಸಹಸ್ರಬುದ್ದೆ ತಿಳಿಸಿದ್ದಾರೆ. ಮೆಕ್ಯಾನಿಕಲ್ ಇಂಜಿನಿಯರಿಂಗ್ ಓದುವವರಿಗೆ ಗಣಿತ, ರಸಾಯನಶಾಸ್ತ್ರ ಮತ್ತು ಭೌತಶಾಸ್ತ್ರದ ಬಗ್ಗೆ ಅರಿವು ಇರಬೇಕು. 12 ನೇ ತರಗತಿ, ತತ್ಸಮಾನದಲ್ಲಿ ಈ ಮೂರು ವಿಷಯಗಳನ್ನು ಓದಿರಬೇಕು ಎನ್ನಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...