ಬೆಂಗಳೂರು : 2024-25 ನೇ ಸಾಲಿನಿಂದ ಬಿ.ಸಿ.ಎ. ಬಿ.ಬಿ.ಎ.. ಬಿ.ಎಂ.ಎಸ್ ಕೋರ್ಸ್ ಗಳಿಗೆ ʻAICTEʼ ಅನುಮೋದನೆ ಪಡೆಯುವ ಕುರಿತು ಕಾಲೇಜು ಶಿಕ್ಷಣ ಇಲಾಖೆ ಮಹತ್ವದ ಆದೇಶ
ಸೂಚಿತ ವಿಷಯಕ್ಕೆ ಸಂಬಂಧಿಸಿದಂತೆ, 2024-25ನೇ ಶೈಕ್ಷಣಿಕ ಸಾಲಿನಿಂದ ಬಿ.ಸಿ.ಎ. ಬಿ.ಬಿ.ಎ.. ಬಿ.ಎಂ.ಎಸ್ ಕೋರ್ಸ್‌ಗಳನ್ನು ಈಗಾಗಲೇ ನಡೆಸುತ್ತಿರುವ ಹಾಗೂ ಪ್ರಾರಂಭಿಸಲು ಇಚ್ಚಿಸುವ ವಿದ್ಯಾಸಂಸ್ಥೆಗಳು AICTE ಅನುಮೋದನೆ ಪಡೆಯುವಂತೆ ಹಾಗೂ AICTE ಅನುಮೋದನೆ ಪಡೆದ ವಿದ್ಯಾಸಂಸ್ಥೆಗಳು ಅನುಸರಿಸಬೇಕಾದ ಕ್ರಮಗಳನ್ನು ಉಲ್ಲೇಖಿತ ಪತ್ರದಲ್ಲಿ ತಿಳಿಸಿರುತ್ತಾರೆ.
ಆದುದರಿಂದ 2024-25ನೇ ಸಾಲಿನಿಂದ ಬಿ.ಸಿ.ಎ, ಬಿ.ಬಿ.ಎ., ಬಿ.ಎಂ.ಎಸ್ ಕೋರ್ಸ್‌ಗಳನ್ನು ನಡೆಸಲು, ಕಾಲೇಜುಗಳು AICTE ಅನುಮೋದನೆ ಪಡೆದ ನಂತರ ವಿಶ್ವವಿದ್ಯಾಲಯದ ಸಂಯೋಜನೆಗೆ ಒಳಪಡಬೇಕಾಗಿರುತ್ತದೆ. ಸದರಿ AICTE ಅನುಮೋದನೆ ಪಡೆಯಲು ಅವಶ್ಯವಿರುವ ಶುಲ್ಕವನ್ನು ಕಾಲೇಜಿನ IDP / ಇಲಾಖೆಯಿಂದ ಬಿಡುಗಡೆಯಾದ ಕಛೇರಿ ವೆಚ್ಚದ ಅನುದಾನದಲ್ಲಿ ಶುಲ್ಕ ಭರಿಸಲು ಅನುಮತಿಸಲಾಗಿರುತ್ತದೆ. ಸದರಿ ಕೋರ್ಸುಗಳನ್ನು ಈಗಾಗಲೇ ನಡೆಸುತ್ತಿರುವ ಹಾಗೂ 2024-25ನೇ ಸಾಲಿನಿಂದ ಪ್ರಾರಂಭಿಸಲು ಆಸಕ್ತಿ ಇರುವ ಕಾಲೇಜುಗಳು ನಿಗಧಿತ ದಿನಾಂಕದೊಳಗಾಗಿ.(26.02.2024) ತಪ್ಪದೆ ನಿಯಮಾನಸಾರ AICTE ಗೆ ಅರ್ಜಿ ಸಲ್ಲಿಸಿ ಅನುಮೋದನೆ ಪಡೆಯುವುದು ಕಡ್ಡಾಯವಾಗಿರುತ್ತದೆ. ತಪ್ಪಿದ್ದಲ್ಲಿ ಮುಂದಿನ ಆಗುಹೋಗುಗಳಿಗೆ ಸಂಬಂಧಿಸಿದ ಕಾಲೇಜುಗಳ ಪ್ರಾಂಶುಪಾಲರುಗಳೇ ನೇರ ಹೊಣಿಯಾಗಿರುತ್ತಾರೆ. ಅರ್ಜಿ ಸಲ್ಲಿಸಲು ಹಾಗೂ ಹೆಚ್ಚಿನ ಮಾಹಿತಿಗಾಗಿ: www.aicte-india.org ಸಂಪರ್ಕಿಸುವುದು.