ಎಐಸಿಸಿ ಅಧ್ಯಕ್ಷರಾಗಿ ಮಲ್ಲಿಕಾರ್ಜುನ ಖರ್ಗೆ ಅಧಿಕಾರದ ಚುಕ್ಕಾಣಿ ಹಿಡಿದಿದ್ದಾರೆ. ಶಶಿ ತರೂರ್ ವಿರುದ್ಧ ಭರ್ಜರಿ ಅಂತರದಲ್ಲಿ ಗೆದ್ದಿದ್ದಾರೆ ಮಲ್ಲಿಕಾರ್ಜುನ ಖರ್ಗೆ. ಸಾಕಷ್ಟು ಬೇರೆ ಬೇರೆ ಅಧಿಕಾರ ನಿರ್ವಹಿಸಿರುವ ಇವರಿಗೆ ಕಾಂಗ್ರೆಸ್ ಉನ್ನತ ಅಧಿಕಾರ ನೀಡಿದೆ.
2019 ರ ರಾಜ್ಯಸಭಾ ಚುನಾವಣೆಯ ಸಂದರ್ಭದಲ್ಲಿ ಇವರು ತಮ್ಮ ಆಸ್ತಿ ಘೋಷಣೆ ಮಾಡಿಕೊಂಡಿದ್ದರು. ಅದರ ಪ್ರಕಾರ, ಇವರಿಗೆ ಸ್ವಂತ ಕಾರು ಇಲ್ಲ. ಜೊತೆಗೆ ಯಾವುದೇ ಆಯುಧಗಳನ್ನು ಇವರು ಹೊಂದಿಲ್ಲವಂತೆ. ಹಾಗೂ 20 ಕೋಟಿ ಆಸ್ತಿ ಮೌಲ್ಯವನ್ನು ಹೊಂದಿರೋದಾಗಿ ಚುನಾವಣಾ ಆಯೋಗಕ್ಕೆ ತೋರಿಸಿದ್ದಾರೆ.
ಅಫಿಡವಿಟ್ ಪ್ರಕಾರ, 25 ಲಕ್ಷ ರೂಪಾಯಿಗಳಿಗೂ ಹೆಚ್ಚು ಷೇರು, ಬಾಂಡ್‌ಗಳಲ್ಲಿ ಹೂಡಿಕೆ ಮಾಡಲಾಗಿದೆ. ಇವರ ಹೆಸರಲ್ಲಿ 8 ಖಾತೆಗಳು ಇವೆ. ಎಸ್ ಬಿ ಐ ಬ್ಯಾಂಕ್ ನಲ್ಲಿ 65 ಲಕ್ಷ ಸ್ಥಿರ ಠೇವಣಿಯಲ್ಲಿ ಮಾತ್ರ ಹೂಡಿಕೆ ಮಾಡಲಾಗಿದೆ. ಅವರು ಈ ಎಫ್‌ಡಿಗಳಿಂದ ಹೆಚ್ಚಿನ ಬಡ್ಡಿಯನ್ನು ಪಡೆಯುತ್ತಾರೆ ಎನ್ನಲಾಗಿದೆ. ಇನ್ನು ಇವರ ಪತ್ನಿ ಹೆಸರಲ್ಲೂ ಯಾವುದೇ ಕಾರು ಇಲ್ಲ.