ಚೆನ್ನೈ: ಚೆನ್ನೈನಲ್ಲಿ ಎಐಎಡಿಎಂಕೆ ಕಾರ್ಯಕರ್ತರ ನಡುವೆ ಘರ್ಷಣೆ ನಡೆದಿದೆ. ಪನ್ನೀರ್ ಸೆಲ್ವಂ ಮತ್ತು ಪಳನಿಸ್ವಾಮಿ ಬಣಗಳ ನಡುವೆ ಮಾರಾಮಾರಿಯೇ ನಡೆದಿದೆ.
ಚೆನ್ನೈನಲ್ಲಿರುವ ಎಐಎಡಿಎಂಕ ಪಕ್ಷದ ಕಚೇರಿ ಎದುರು ಹೈಡ್ರಾಮಾ ನಡೆದಿದ್ದು, ಎರಡೂ ಬಣಗಳ ಕಾರ್ಯಕರ್ತರು ರಸ್ತೆಯಲ್ಲಿಯೇ ಹೊಡೆದಾಡಿಕೊಂಡಿದ್ದಾರೆ. ಕಲ್ಲು, ದೊಣ್ಣೆಗಳಿಂದ ಮಾರಾಮಾರಿಯೇ ನಡೆದಿದೆ. ನಾಯಕತ್ವಕ್ಕಾಗಿ ನಡೆದ ಆಂತರಿಕ ಕಲಹದ ಹಿನ್ನೆಲೆಯಲ್ಲಿ ಕಾರ್ಯಕರ್ತರು ಪರಸ್ಪರ ಹೊರಡೆದಾಡಿಕೊಂಡಿದ್ದಾರೆ. ಕಲ್ಲುತೂರಾಟ, ದೊಣ್ಣೆಗಳಿಂದ ಉದ್ರಿಕ್ತ ಕಾರ್ಯಕರ್ತರ ನಡುವೆ ಹೊಡೆದಾಟ ನಡೆದಿದೆ.
ಇಂದು ನಡೆಯಲಿರುವ ಎಐಎಡಿಎಂಕೆ ಪಕ್ಷದ ‘ಐತಿಹಾಸಿಕ’ ಜನರಲ್ ಕೌನ್ಸಿಲ್ ಮತ್ತು ಕಾರ್ಯಕಾರಿ ಸಮಿತಿ ಸಭೆಯು ಪಳನಿಸ್ವಾಮಿ ಅವರನ್ನು ಪಕ್ಷದ ಏಕೈಕ, ಸರ್ವೋಚ್ಚ ನಾಯಕನನ್ನಾಗಿ ಆಯ್ಕೆ ಮಾಡಲಿದ್ದು, ಓ. ಪನ್ನೀರಸೆಲ್ವಂ ಅವರನ್ನು ಸ್ಪಷ್ಟವಾಗಿ ನೇಪಥ್ಯಕ್ಕೆ ತಳ್ಳಲಾಗಿದೆ. ಸಭೆ ನಡೆಸುವುದನ್ನು ವಿರೋಧಿಸಿ ಸಲ್ಲಿಸಿರುವ ಅರ್ಜಿಯ ಕುರಿತು ಮದ್ರಾಸ್ ಹೈಕೋರ್ಟ್ ಇಂದು ಬೆಳಗ್ಗೆ ತೀರ್ಪು ಪ್ರಕಟಿಸಲು ಸಜ್ಜಾಗಿದ್ದು, ಈ ನಡುವೆ ಸಭೆ ನಡೆಸಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಇದರ ನಡುವೆ ಉಭಯ ಬಣದ ಕಾರ್ಯಕರ್ತರ ನಡುವೆ ಮಾರಾಮಾರಿ ನಡೆದಿದೆ.