ಬೆಂಗಳೂರು : ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ನೇಮಕಾತಿ ಪರೀಕ್ಷೆಗಳಲ್ಲಿ AI ತಂತ್ರಜ್ಞಾನ ಬಳಸಲಾಗಿದೆ ಎಂದು ಸಚಿವ ಎಮ್.ಸಿ ಸುಧಾಕರ್ ಹೇಳಿದ್ದಾರೆ.
ಪ್ರಥಮ ಬಾರಿಗೆ ಕರ್ಣಾಟಕ ಪರೀಕ್ಷಾ ಪ್ರಾಧಿಕಾರದ ನೇಮಕಾತಿ ಪರೀಕ್ಷೆಗಳಲ್ಲಿ AI ತಂತ್ರಜ್ಞಾನ ಬಳಸಲಾಗಿದೆ. ಮೊಬೈಲ್ ಆಧಾರಿತವಾಗಿ ಅಭ್ಯರ್ಥಿಗಳ ಗುರುತಿನ ದೃಢೀಕರಣ ನಡೆಸಿ ನಕಲಿ ಹಾಜರಾತಿ ತಡೆಗಟ್ಟಲಾಗಿದೆ.ಪರೀಕ್ಷೆ ಮುಗಿದ ಕೆಲವೇ ಗಂಟೆಗಳಲ್ಲಿ OMR Sheet ಬಿಡುಗಡೆ ಮಾಡಿ ಫಲಿತಾಂಶದ ಪಾರದರ್ಶಕತೆಯನ್ನು ಹೆಚ್ಚಿಸಲಾಗಿದೆ.ಮುಂದಿನ ಎಲ್ಲಾ ನೇಮಕಾತಿ ಪರೀಕ್ಷೆಗಳಲ್ಲಿ ಈ ವಿಧಾನಗಳನ್ನು ಅಳವಡಿಸಲಾಗುವುದು ಎಂದು ಸಚಿವ ಎಮ್.ಸಿ ಸುಧಾಕರ್ ಹೇಳಿದ್ದಾರೆ.