alex Certify ಚುನಾವಣೆಯಲ್ಲಿ ಎಐ ತಂತ್ರಜ್ಞಾನ ಬಳಕೆ: ಬ್ಯಾಂಕ್, ನಗದು ವ್ಯವಹಾರ, ಯುಪಿಐ ಹಣದ ವಹಿವಾಟಿನ ಮೇಲೆ ಆಯೋಗ ಹದ್ದಿನ ಕಣ್ಣು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಚುನಾವಣೆಯಲ್ಲಿ ಎಐ ತಂತ್ರಜ್ಞಾನ ಬಳಕೆ: ಬ್ಯಾಂಕ್, ನಗದು ವ್ಯವಹಾರ, ಯುಪಿಐ ಹಣದ ವಹಿವಾಟಿನ ಮೇಲೆ ಆಯೋಗ ಹದ್ದಿನ ಕಣ್ಣು

ನವದೆಹಲಿ: ಮುಕ್ತ ಮತ್ತು ಪಾರದರ್ಶಕ ಲೋಕಸಭೆ ಚುನಾವಣೆಗಾಗಿ ಚುನಾವಣಾ ಆಯೋಗದ ವತಿಯಿಂದ ಇದೇ ಮೊದಲ ಬಾರಿಗೆ ಕೃತಕ ಬುದ್ಧಿಮತ್ತೆ ತಂತ್ರಜ್ಞಾನ(AI) ಬಳಸಿಕೊಳ್ಳಲಾಗುತ್ತದೆ.

ಇದಕ್ಕಾಗಿ ಗೂಗಲ್ ಜೊತೆ ಆಯೋಗ ಒಪ್ಪಂದ ಮಾಡಿಕೊಂಡಿದೆ. ಇದರೊಂದಿಗೆ ನಗದು ವ್ಯವಹಾರ ಮಾತ್ರವಲ್ಲದೆ, ಭಾರಿ ಪ್ರಮಾಣದ ಯುಪಿಐ ಹಣದ ವಹಿವಾಟು, ಬ್ಯಾಂಕ್ ವಹಿವಾಟುಗಳ ಮೇಲೆಯೂ ಚುನಾವಣಾ ಆಯೋಗ ಹದ್ದಿನ ಕಣ್ಣು ಇಡಲಿದೆ.

ಸಾಮಾಜಿಕ ಜಾಲತಾಣ ಮತ್ತು ಡಿಜಿಟಲ್ ಮಾಧ್ಯಮಗಳಲ್ಲಿ ಪ್ರಕಟವಾಗುವ ತಪ್ಪು ಮಾಹಿತಿಗಳನ್ನು ಪತ್ತೆ ಹಚ್ಚಿ ಅದನ್ನು ತೆಗೆದು ಹಾಕುವ ಕೆಲಸವನ್ನು ಕೃತಕ ಬುದ್ಧಿಮತ್ತೆ ವಿಭಾಗ ಮಾಡಲಿದೆ. ಇದರಿಂದಾಗಿ ಸಾಮಾಜಿಕ ಜಾಲತಾಣಗಳಲ್ಲಿ ಪ್ರಚೋದನಕಾರಿ ಭಾಷಣ ತೆಗೆಯುವ ಪ್ರಕ್ರಿಯೆಗೆ ಅತ್ಯಂತ ವೇಗವಾಗಿರುತ್ತದೆ. ಅಭ್ಯರ್ಥಿಗಳು ಪದೇ ಪದೇ ನಿಯಮ ಉಲ್ಲಂಘಿಸಿದಲ್ಲಿ ಅವರ ಸಾಮಾಜಿಕ ಜಾಲತಾಣಗಳ ಖಾತೆಗಳನ್ನು ಬ್ಲಾಕ್ ಮಾಡಲಾಗುವುದು. ಇತ್ತೀಚೆಗೆ ಅಭ್ಯರ್ಥಿಗಳು ನೇರವಾಗಿ ನಗದು ಹಂಚಿಕೆ ಕೈಬಿಟ್ಟು ಯುಪಿಐ ಮೂಲಕ ಮತದಾರರಿಗೆ ಹಣ ಕಳಿಸಿ ಆಮಿಷವೊಡ್ಡುವುದು ಕಂಡುಬಂದಿದೆ. ಹೀಗಾಗಿ ಭಾರಿ ಪ್ರಮಾಣದಲ್ಲಿ ಯುಪಿಐ ಮತ್ತು ಇಂಟರ್ನೆಟ್ ಬ್ಯಾಂಕಿಂಗ್ ವಹಿವಾಟು ನಡೆಸುವುದರ ಮೇಲೆಯೂ ಚುನಾವಣಾ ಆಯೋಗ ನಿಗಾ ವಹಿಸಲಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...