ಮೊಬೈಲ್ ಫೋನ್ ಬಳಸಿದರು ಎಂಬ ಕ್ಷುಲ್ಲಕ ಕಾರಣಕ್ಕೆ 43 ವರ್ಷದ ಮಹಿಳೆಯೊಬ್ಬರ ಮೇಲೆ ಆಕೆಯ ಪತಿ ಹಲ್ಲೆ ಮಾಡಿ ದೂರವಿಟ್ಟ ಘಟನೆ ಅಹಮದಾಬಾದ್‌ನಲ್ಲಿ ನಡೆದಿದೆ. ತಾನು ಮನೆಯಲ್ಲಿ ಇಲ್ಲದ ವೇಳೆಯಲ್ಲಿ ಮೊಬೈಲ್ ಬಳಸುವುದು ಪತಿಗೆ ಇಷ್ಟವಿರಲಿಲ್ಲವೆಂದು ಸಂತ್ರಸ್ತೆ ತಿಳಿಸಿದ್ದಾರೆ.
2001ರಲ್ಲಿ ಮದುವೆಯಾದ ಈ ಜೋಡಿಗೆ 19 ಮತ್ತು 7 ವರ್ಷದ ಇಬ್ಬರು ಹೆಣ್ಣುಮಕ್ಕಳಿದ್ದಾರೆ. ಮದುವೆಯಾದಾಗಿನಿಂದ ಚೆನ್ನಾಗೇ ಇದ್ದ ತನ್ನ ಪತಿಯ ವರ್ತನೆ ಕಳೆದ ಒಂದು ವರ್ಷದಲ್ಲಿ ಬದಲಾಗಿದೆ ಎಂದು ಮಹಿಳೆ ದೂರಿನಲ್ಲಿ ತಿಳಿಸಿದ್ದಾರೆ.
ಬಿಸಿ ನೀರು ಕುಡಿಯಿರಿ ರೋಗನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಿ
ಕಳೆದ ವರ್ಷ ನಡೆದ ಗಲಾಟೆಯೊಂದರ ವೇಳೆ, ತನ್ನ ಅನುಪಸ್ಥಿತಿಯಲ್ಲಿ ಮೊಬೈಲ್ ಬಳಸದೇ ಇರಲು ಈತ ತನ್ನ ಪತ್ನಿಗೆ ತಾಕೀತು ಮಾಡಿದ್ದಾನೆ ಎಂದು ವರದಿಗಳು ತಿಳಿಸಿವೆ. ಆದರೆ ತನ್ನ ಇಚ್ಛೆಯ ವಿರುದ್ಧವಾಗಿ ತನ್ನ ಮಡದಿ ಮೊಬೈಲ್ ಬಳಸುತ್ತಿರುವುದುನ್ನು ಸಹಿಸಲಾರದ ಈತ ಆಕೆಯ ಮೇಲೆ ಹಲ್ಲೆ ಮಾಡಿ ಆಕೆಯನ್ನು ಹೆತ್ತವರ ಮನೆಗೆ ಬಿಟ್ಟಿದ್ದಾನೆ.
ರಾಜಿಯಾಗಬಹುದು ಎಂದು ಒಂದು ವರ್ಷದವರೆಗೂ ಕಾದ ಪತ್ನಿ, ಯಾಕೋ ಯಾವುದೂ ನೆಟ್ಟಗಾಗುವಂತೆ ಕಾಣದ ಬಳಿಕ ಇಲ್ಲಿನ ವಾಸ್ನಾ ಪೊಲೀಸ್ ಠಾಣೆಯಲ್ಲಿ ತಮ್ಮ ಪತಿ ವಿರುದ್ಧ ಕೌಟುಂಬಿಕ ದೌರ್ಜನ್ಯದ ಆರೋಪದ ಮೇಲೆ ದೂರು ದಾಖಲಿಸಿದ್ದಾರೆ.