ಅಹಮದಾಬಾದ್‌ನ ಕಂಕ್ರಿಯಾ ಮೃಗಾಲಯದಲ್ಲಿ ನಡೆದ ಒಂದು ವಿಚಿತ್ರ ಘಟನೆ ಬೆಳಕಿಗೆ ಬಂದಿದೆ. ತನ್ನ ಗೆಳತಿಯನ್ನು ಮೆಚ್ಚಿಸಲು ಯುವಕನೊಬ್ಬ ಹುಲಿಯಿದ್ದ ಪ್ರಾಂಗಣಕ್ಕೆ ಹಾರಿದ್ದಾನೆ. ಈ ಕುಕೃತ್ಯದ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಜಿಗೇಂದ್ರ ಪ್ರತಾಪ್ ಸಿಂಗ್ ಎಂಬುವವರು ಈ ವಿಡಿಯೋವನ್ನು X (ಹಿಂದೆ ಟ್ವಿಟರ್) ನಲ್ಲಿ ಹಂಚಿಕೊಂಡಿದ್ದಾರೆ. ಯುವಕ ಹುಲಿಯ ಪ್ರಾಂಗಣಕ್ಕೆ ಹಾರುವ ಮೊದಲು ತನ್ನ ಫೋನನ್ನು ಗೆಳತಿಗೆ ಕೊಟ್ಟು ವಿಡಿಯೋ ಮಾಡುವಂತೆ ಹೇಳಿದ್ದಾನೆ. ನಂತರ ಅವನು ಬೇಲಿಯನ್ನೇರಿ, ಮರವನ್ನೇರಿ ಹುಲಿಯ ಪ್ರಾಂಗಣಕ್ಕೆ ಹಾರಿದ್ದಾನೆ.
ಅದೃಷ್ಟವಶಾತ್, ಹುಲಿ ವಿಶ್ರಾಂತಿ ಪಡೆಯುತ್ತಿದ್ದು, ತಕ್ಷಣಕ್ಕೆ ಯಾವುದೇ ಅಪಾಯ ಸಂಭವಿಸಿಲ್ಲ. ಕೂಡಲೇ ಮೃಗಾಲಯದ ಸಿಬ್ಬಂದಿ ಹುಲಿಯ ಬೋನನ್ನು ಭದ್ರಪಡಿಸಿ ಯುವಕನನ್ನು ರಕ್ಷಿಸಿದ್ದಾರೆ. ನಂತರ ಪೋಲೀಸರು ಸ್ಥಳಕ್ಕೆ ಬಂದು ಯುವಕನಿಗೆ ತಪರಾಕಿ ನೀಡಿದ್ದಾರೆ.
ಈ ವಿಡಿಯೋವನ್ನು ನೋಡಿದ ನೆಟಿಜನ್‌ಗಳು ತರಹೇವಾರಿ ಪ್ರತಿಕ್ರಿಯೆ ನೀಡಿದ್ದಾರೆ. ಕೆಲವರು ಹಾಸ್ಯಮಯವಾಗಿ ಕಾಮೆಂಟ್ ಮಾಡಿದ್ದಾರೆ. “ಗೆಳತಿಗೂ ಅವನ ಸಾಹಸದ ಬಗ್ಗೆ ಹೆಮ್ಮೆ ಇತ್ತು. ಆದರೆ ಸ್ವಾಗತ (ಶಿಕ್ಷೆ) ಹುಡುಗನಿಗೆ ಮಾತ್ರ ಸಿಕ್ಕಿತು, ಹುಡುಗಿಗೆ ಅಲ್ಲ” ಎಂದು ಒಬ್ಬರು ಬರೆದಿದ್ದಾರೆ.
अहमदाबाद के काकरिया जू में एक युवक अपनी गर्लफ्रेंड के साथ गया
और जब वह बाघ के बाड़े पर पहुंचा तब अपनी गर्लफ्रेंड को इंप्रेस करने के लिए फोन अपनी गर्लफ्रेंड को दिया और कहा कि तुम वीडियो बनाओ और वहां एक ग्रिल से चढ़ते हुए पेड़ पर चढ़कर बाघ के बाड़े में उतर गया
वह तो अच्छा था कि… pic.twitter.com/YN9ldnHoNt
— 🇮🇳Jitendra pratap singh🇮🇳 (@jpsin1) February 12, 2025