ಅಹಮದಾಬಾದ್: ತನ್ನ ಹೆಂಡತಿಯೊಂದಿಗೆ ಲೈಂಗಿಕ ಸಂಬಂಧ ನಿಲ್ಲಿಸಿದ ಪತಿರಾಯ ಕಿರುಕುಳ ನೀಡಿ ಥಳಿಸಿದ ಘಟನೆ ಗುಜರಾತ್ ನ ಅಹಮದಾಬಾದ್ ನಲ್ಲಿ ನಡೆದಿದೆ.
ತನ್ನ ಪತಿಯಿಂದ ಲೈಂಗಿಕತೆಯಿಂದ ವಂಚಿತಳಾದ ಮಹಿಳೆ ಗಂಡ ಹಲ್ಲೆ ಮಾಡಿದ್ದಾನೆ ಎಂದು ಆರೋಪಿಸಿದ್ದಾಳೆ. ಲೈಂಗಿಕಕ್ರಿಯೆಗೆ ಕರೆದಾಗಲೆಲ್ಲಾ ಪತಿ ತನ್ನನ್ನು ಕ್ರೂರವಾಗಿ ಥಳಿಸಿದ್ದಾನೆ. ಈ ವರ್ಷದ ಆಗಸ್ಟ್ ನಲ್ಲಿ ತನ್ನನ್ನು ತ್ಯಜಿಸಿದ್ದಾನೆ ಎಂದು ಹೇಳಿದ್ದಾಳೆ.
ಫೆಬ್ರವರಿ 27 ರಂದು ಮದುವೆಯಾಗಿದ್ದು, ಮದುವೆಯಾದ ಕೆಲವೇ ದಿನಗಳಲ್ಲಿ ವರದಕ್ಷಿಣೆಗಾಗಿ ಮಹಿಳೆಯ ಅತ್ತೆ ಮತ್ತು ಪತಿ ಕಿರುಕುಳ ನೀಡಲಾರಂಭಿಸಿದ್ದಾರೆ. ಇದರೊಂದಿಗೆ ಆರೋಪಿ ತನ್ನ ಹೆಂಡತಿಯೊಂದಿಗೆ ವಿಚಿತ್ರವಾಗಿ ವರ್ತಿಸಲು ಆರಂಭಿಸಿದ್ದಾನೆ. ಮದುವೆಯಾದ 10 ದಿನಗಳ ನಂತರ ಪತಿಯೊಂದಿಗೆ ಲೈಂಗಿಕ ಕ್ರಿಯೆ ನಡೆಸಿದ್ದಳು. ಆದರೆ, ನಂತರದಲ್ಲಿ ಆತ ಸೆಕ್ಸ್ ನಿಲ್ಲಿಸಿದ್ದಾನೆ ಎಂದು ಮಹಿಳೆ ಆರೋಪಿಸಿದ್ದಾಳೆ.
ಮಹಿಳೆ ಆರೋಪಿಸಿರುವಂತೆ, ಪತಿ ನನ್ನೊಂದಿಗೆ ಲೈಂಗಿಕ ಸಂಬಂಧವನ್ನು ನಿಲ್ಲಿಸಿದ್ದ. ಬೆಡ್ ರೂಮ್ ನಲ್ಲಿ ಒಟ್ಟಿಗೆ ಇದ್ದಾಗ ನನ್ನೊಂದಿಗೆ ವಿಚಿತ್ರವಾಗಿ ವರ್ತಿಸುತ್ತಿದ್ದ. ನಾನು ಲೈಂಗಿಕ ಕ್ರಿಯೆಗೆ ಕರೆದಾಗ ಅವನು ನನ್ನನ್ನು ಕೆಟ್ಟದಾಗಿ ಥಳಿಸುತ್ತಿದ್ದ. ನನ್ನನ್ನು ಏಕಾಂಗಿಯಾಗಿ ಬಿಟ್ಟಿದ್ದ ಎಂದು ತಿಳಿಸಿದ್ದಾಳೆ.
ವರದಿಯ ಪ್ರಕಾರ, ಪತ್ನಿಯನ್ನು ಇಷ್ಟಪಡದ ಆತ ಇನ್ನೊಬ್ಬ ಮಹಿಳೆಯೊಂದಿಗೆ ಲೈಂಗಿಕ ಸಂಬಂಧ ಹೊಂದಲು ಬಯಸಿದ್ದ. ಪತಿ ಮತ್ತು ಅತ್ತೆಯ ವರ್ತನೆಯಿಂದ ಕಂಗೆಟ್ಟ ಮಹಿಳೆ ಆಗಸ್ಟ್ 1 ರಂದು ತಮ್ಮ ಮನೆಯನ್ನು ತೊರೆದು ತವರಿಗೆ ಹೋಗಿದಾಳೆ.
ಆದಾಗ್ಯೂ, ರಾಜಿ ಪಂಚಾಯಿತಿ ನಂತರ ಗಂಡನ ಮನೆಗೆ ಮರಳಿದ್ದಾಳೆ. ಮತ್ತೆ ಗಂಡ ಹಾಗೂ ಅತ್ತೆ ಕಿರುಕುಳ ನೀಡಿದ್ದಾರೆ. ಇದರಿಂದಾಗಿ ನೊಂದ ಮಹಿಳೆ ತವರಿಗೆ ವಾಪಸ್ ಹೋಗಿ ಪೊಲೀಸರಿಗೆ ಗಂಡನ ವಿರುದ್ಧ ಕೌಟುಂಬಿಕ ದೌರ್ಜನ್ಯದ ದೂರು ನೀಡಿದ್ದಾಳೆ. ದೂರಿನಲ್ಲಿ ಗಂಡನ ಕಿರುಕುಳದ ಬಗ್ಗೆ ಮಾಹಿತಿ ನೀಡಿದ್ದಾಳೆ.