
ಅಹ್ಮದಾಬಾದ್: ಅಶ್ಲೀಲ ಚಿತ್ರಗಳಿಂದ ಸ್ಫೂರ್ತಿ ಪಡೆದ ವ್ಯಕ್ತಿ ಅಸಹಜ ಲೈಂಗಿಕ ಕ್ರಿಯೆ ನಡೆಸುವಂತೆ ಪತ್ನಿಯನ್ನು ಪೀಡಿಸಿ ಥಳಿಸಿದ್ದು, ಈ ಕುರಿತಂತೆ ಪ್ರಕರಣ ದಾಖಲಿಸಲಾಗಿದೆ
45 ವರ್ಷದ ಮಹಿಳೆ ತನ್ನ 48 ವರ್ಷದ ಗಂಡನ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದು, ಆತ ತನ್ನನ್ನು ಅಸಹಜ ಲೈಂಗಿಕ ಕ್ರಿಯೆ ಬಲವಂತ ಮಾಡಿ ಕೌಟುಂಬಿಕ ದೌರ್ಜನ್ಯ ಎಸಗಿದ್ದಾನೆ ಎಂದು ಆರೋಪಿಸಿದ್ದಾಳೆ.
ಅಹಮದಾಬಾದ್ ನ ನವರಂಗಪುರ ನಿವಾಸಿಯಾಗಿರುವ ದೂರುದಾರ ಮಹಿಳೆ ಖಾಸಗಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದು, ಆಕೆಯ ಪತಿ ಐಟಿ ಕಂಪನಿ ನಡೆಸುತ್ತಿದ್ದಾರೆ. ಮದುವೆಯಾದ ನಂತರದಲ್ಲಿ ಕ್ಷುಲ್ಲಕ ವಿಚಾರಗಳಿಗೂ ತನ್ನ ಮೇಲೆ ಹಲ್ಲೆ ಮಾಡಲು ಆರಂಭಿಸಿದ್ದ ಎಂದು ಆಕೆ ಹೇಳಿದ್ದಾಳೆ.
ಆತ ತನ್ನೊಂದಿಗೆ ಅಸ್ವಾಭಾವಿಕ ಲೈಂಗಿಕತೆಯಲ್ಲಿ ತೊಡಗುವಂತೆ ಒತ್ತಾಯಿಸಿದ್ದ. ಆಕ್ಷೇಪಿಸಿದಾಗಲೆಲ್ಲಾ ಥಳಿಸಿದ್ದ. ಸುಮಾರು ನಾಲ್ಕು ತಿಂಗಳ ಹಿಂದೆ ಗಂಡನನ್ನು ತೊರೆದು ತವರುಮನೆ ಸೇರಿರುವುದಾಗಿ ಮಹಿಳೆ ತಿಳಿಸಿದ್ದಾಳೆ.
ಅಶ್ಲೀಲ ಚಲನಚಿತ್ರಗಳ ಪ್ರಭಾವದಿಂದ ತನ್ನ ಹೆಂಡತಿಯನ್ನು ಅಸ್ವಾಭಾವಿಕ ಲೈಂಗಿಕತೆಗೆ ಒತ್ತಾಯಿಸುತ್ತಿದ್ದ ಆರೋಪಿ ಸಣ್ಣಪುಟ್ಟ ವಿಷಯಗಳಿಗಾಗಿ ಹೊಡೆಯುತ್ತಿದ್ದ. ದಂಪತಿ ನಡುವೆ ಜಗಳ ನಡೆದ ಸಂದರ್ಭದಲ್ಲಿ ಕುಟುಂಬದ ಸದಸ್ಯರು ಮತ್ತು ಗೆಳೆಯರು ರಾಜಿ ಮಾಡಿಕೊಳ್ಳುವಂತೆ ಒತ್ತಡ ಹೇರುತ್ತಿದ್ದರು ಎಂದು ಸಂತ್ರಸ್ತೆ ಹೇಳಿದ್ದು, ಗಂಡನ ನಡವಳಿಕೆ ಸುಧಾರಿಸದ ಕಾರಣ ಆಕೆ ಪೊಲೀಸರಿಗೆ ದೂರು ನೀಡಲು ನಿರ್ಧರಿಸಿದ್ದಾಳೆ.
ಗಂಡ ದೊಡ್ಡ ಐಟಿ ಸಂಸ್ಥೆ ನಡೆಸುತ್ತಿದ್ದ ಕಾರಣ ಬಹಳ ಸಮಯದವರೆಗೆ ಈ ವಿಷಯವನ್ನು ಆಕೆ ಹೇಳಿಕೊಂಡಿರಲಿಲ್ಲ. ಪತಿ ತನ್ನ ಪ್ರಭಾವ, ಹಣ ಬಳಸಿಕೊಂಡು ಪೊಲೀಸರ ಮೇಲೆ ಪ್ರಭಾವ ಬೀರಬಹುದು ಎಂದು ಅವಳು ಭಾವಿಸಿದ್ದಳು. ಕೊನೆಗೆ ಗಂಡನ ಕಾಟ ತಡೆಯಲಾರದೇ ದೂರು ನೀಡಿದ್ದಾಳೆ ಎಂದು ಹೇಳಲಾಗಿದೆ.