ಇತ್ತೀಚಿನ ದಿನಗಳಲ್ಲಿ ಭಕ್ಷ್ಯ, ತಿನಿಸು ತಯಾರಿಕೆಯಲ್ಲಿ ಹೊಸ ಪ್ರಯೋಗ ವಿಲಕ್ಷಣವಾಗಿ ಕಾಣಿಸುತ್ತಿದ್ದು ಟೀಕೆಗೂ ಗುರಿಯಾಗುತ್ತಿದೆ. ಕೆಲವರಿಗೂ ಇಷ್ಟವೂ ಆಗಬಹುದು. ಸದ್ಯ ಅಹಮದಾಬಾದ್‌ನ ಆಹಾರ ಮಳಿಗೆಯ ಒಂದು ಪ್ರಯೋಗದ ಬಗ್ಗೆ ಜಾಲತಾಣದಲ್ಲಿ ಬಹಳ ಚರ್ಚೆಯಾಗುತ್ತಿದೆ. ಕೆಲವರಿಗೆ ಇಷ್ಟವಾದರೆ ಮತ್ತೆ ಕೆಲವರ ಟೀಕೆಗೆ ಗುರಿಯಾಗಿದೆ.
ಸಿಜ್ಲಿಂಗ್ ಬ್ರೌನಿಗಳನ್ನು ಸಾಮಾನ್ಯವಾಗಿ ಚಾಕೊಲೇಟ್ ಸಾಸ್‌ನಲ್ಲಿ ಬೆರೆಸಲಾಗುತ್ತದೆ ಮತ್ತು ವೆನಿಲ್ಲಾ ಐಸ್‌ಕ್ರೀಮ್ ಮತ್ತು ಚಾಕೊ ಚಿಪ್‌ಗಳೊಂದಿಗೆ ಬಡಿಸಲಾಗುತ್ತದೆ, ಗುಜರಾತ್‌ನ ಒಂದು ಉಪಾಹಾರ ಗೃಹ ಅದನ್ನು ದೇಸಿ ಮೌತ್-ಫ್ರೆಶನರ್‌ನೊಂದಿಗೆ ಬೆರೆಸಿದೆ.
KYC ಹೆಸರಲ್ಲಿ ವಂಚನೆ…! ಗ್ರಾಹಕರಿಗೆ ಎಸ್.ಬಿ.ಐ. ನೀಡಿದೆ ಈ ಮಹತ್ವದ ಸೂಚನೆ
ವೈರಲ್ ಆಗುತ್ತಿರುವ ವಿಡಿಯೋದಲ್ಲಿ, ಅಡುಗೆ ತಯಾರಕರು ಚಾಕೊಲೇಟ್ ಸಾಸ್ ಅನ್ನು ಸಿಜ್ಲಿಂಗ್ ಪ್ಲೇಟರ್‌ನಲ್ಲಿ ಸುರಿಯುತ್ತಾರೆ ಮತ್ತು ಅದರ ಮೇಲೆ ಬ್ರೌನಿ ಕ್ಯೂಬ್ ಅನ್ನು ಇಡುತ್ತಾರೆ. ನಂತರ ಮಿಂಟ್ ಗ್ರೀನ್ ಐಸ್ ಕ್ರೀಂನ ಒಂದು ಸ್ಕೂಪ್ ಅನ್ನು ಸೇರಿಸುತ್ತಾರೆ. ಅಲ್ಲಿಗೆ ಬಗೆಬಗೆಯ ಸಿಹಿತಿಂಡಿಗಳಿಂದ ತುಂಬಿದ ಮಿಥಾ ಪಾನ್ ರೆಡಿ.
ವಿಡಿಯೊವನ್ನು ಶೇರ್ ಮಾಡಿರುವ @Dhuandhaar ಪ್ರಕಾರ, ವಿಡಿಯೋವು ಅಹಮದಾಬಾದ್‌ನ ಫುಡ್ ಜಾಯಿಂಟ್‌ನದ್ದಾಗಿದೆ.
ಅನೇಕರು ವಿಡಿಯೋ ನೋಡಿ ಟೀಕಿಸಿದ್ದಾರೆ. ಮತ್ತೆ ಕೆಲವರು ಬ್ರೌನಿ ಮತ್ತು ಪಾನ್ ಎರಡನ್ನೂ ಹಾಳುಮಾಡಿದ್ದಾರೆ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ. ಇದೇ ವೇಳೆ ಒರಿಯೋ ಪಕೋಡ ಮಾಡುವುದನ್ನು ಒಬ್ಬರು ನೆನಪಿಸಿಕೊಂಡಿದ್ದಾರೆ.
https://twitter.com/d2trend/status/1458717355962511361?ref_src=twsrc%5Etfw%7Ctwcamp%5Etweetembed%7Ctwterm%5E1458717355962511361%7Ctwgr%5E%7Ctwcon%5Es1_&ref_url=https%3A%2F%2Findianexpress.com%2Farticle%2Ftrending%2Ftrending-in-india%2Fahmedabad-eatery-serves-chocolate-brownie-topped-with-paan-netizens-divided-7618059%2F