alex Certify ಪ್ರಧಾನಿಗೆ ಕಾಣಿಸದಂತೆ ಒರೆವಾ ಕಂಪೆನಿ ಹೆಸರು ಮುಚ್ಚಿದ ಜಿಲ್ಲಾಡಳಿತ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪ್ರಧಾನಿಗೆ ಕಾಣಿಸದಂತೆ ಒರೆವಾ ಕಂಪೆನಿ ಹೆಸರು ಮುಚ್ಚಿದ ಜಿಲ್ಲಾಡಳಿತ….!

ಮೊರ್ಬಿ: ಸೇತುವೆ ಕುಸಿದು 47 ಮಕ್ಕಳು ಸೇರಿದಂತೆ 135 ಜನರು ಸಾವಿಗೀಡಾದ ಗುಜರಾತ್ ನ ಮೊರ್ಬಿ ಸೇತುವೆ ಘಟನಾ ಸ್ಥಳಕ್ಜೆ ಪ್ರಧಾನಿ ನರೇಂದ್ರ ಮೋದಿಯವರು ಭೇಟಿ ನೀಡಿ ಪರಿಶೀಲಿಸಿದರು. ದುರಂತ ನಡೆದ ಸೇತುವೆಯ ಕೊನೆಯಲ್ಲಿ ನಿಂತು ಪರಿಶೀಲನೆ ನಡೆಸಿದ ಮೋದಿಯವರು, ರಕ್ಷಣಾ ಕಾರ್ಯಾಚರಣೆಯ ಮಾಹಿತಿ ಪಡೆದುಕೊಂಡರು.

ಪ್ರಧಾನಿ ಮೋದಿಯವರ ಆಗಮನದ ಸುದ್ದಿ ತಿಳಿಯುತ್ತಲೇ ಸ್ಥಳೀಯ ಆಡಳಿತವು ಸೇತುವೆ ನಿರ್ವಹಣಾ ಕಂಪೆನಿ ಒರೆವಾ ಬೋರ್ಡ್ ಅನ್ನು ಬಿಳಿ ಬಟ್ಟೆಯಿಂದ ಮುಚ್ಚುತ್ತಿರುವುದು ಕಂಡುಬಂದಿದ್ದು, ಇದು ವೈರಲ್​ ಆಗಿದೆ. ಜಿಲ್ಲಾಡಳಿತದ ಕ್ರಮಕ್ಕೆ ತೀವ್ರ ಆಕ್ರೋಶ ವ್ಯಕ್ತವಾಗಿದೆ.

ಸೇತುವೆಯ ನಿರ್ವಹಣೆಯನ್ನು 15 ವರ್ಷಗಳ ಅವಧಿಗೆ ಒರೆವಾ ಕಂಪನಿಗೆ ನೀಡಲಾಗಿತ್ತು. ಈ ವರ್ಷದ ಮಾರ್ಚ್‌ ತಿಂಗಳಿನಲ್ಲಿ ನವೀಕರಣ ಕಾರ್ಯ ಆರಂಭಿಸಿದ್ದರಿಂದ ಸಂಚಾರಕ್ಕೆ ನಿರ್ಬಂಧ ಹೇರಲಾಗಿತ್ತು. ನವೀಕರಣದ ಕಾರ್ಯ ಮುಗಿದ ನಂತರ ಅಕ್ಟೋಬರ್‌ 26ರಂದು ಪುನಃ ಸಾರ್ವಜನಿಕರಿಗೆ ಮುಕ್ತಗೊಳಿಸಲಾಗಿತ್ತು. ಆದರೆ, ಸ್ಥಳೀಯ ಸಂಸ್ಥೆಯು ಇನ್ನೂ ಅರ್ಹತಾ ಪ್ರಮಾಣಪತ್ರ ನೀಡಿರಲಿಲ್ಲ. ಆದರೂ ಸೇತುವೆಯನ್ನು ಸಾರ್ವಜನಿಕರಿಗೆ ಮುಕ್ತಗೊಳಿಸಿದ್ದಾರೆ ಎನ್ನಲಾಗಿದೆ. ಆದರೆ ಈ ಕಂಪೆನಿಯ ಹೆಸರು ಕಾಣಿಸದಂತೆ ಜಿಲ್ಲಾಡಳಿತ ಮಾತ್ರ ಬಿಳಿಹಾಳೆಯಿಂದ ಮುಚ್ಚಿರುವುದು ಹಲವರ ಕೆಂಗಣ್ಣಿಗೆ ಗುರಿಯಾಗಿದೆ.

ಪ್ರಧಾನಿ ಮೋದಿಯವರು ಕೇಬಲ್ ಸೇತುವೆ ಕುಸಿತದ ದುರ್ಘಟನೆಯಲ್ಲಿ ರಕ್ಷಣಾ ಕಾರ್ಯದಲ್ಲಿ ತೊಡಗಿರುವ ರಾಷ್ಟ್ರೀಯ ವಿಪತ್ತು ನಿರ್ವಹಣಾ ಸಿಬ್ಬಂದಿಯ ಜತೆ ಚರ್ಚೆ ನಡೆಸಿ ಘಟನೆಯ ಬಗ್ಗೆ ಮಾಹಿತಿ ಪಡೆದುಕೊಂಡರು. ಸಂತ್ರಸ್ತರಿಗೆ ಎಲ್ಲ ರೀತಿಯ ನೆರವು ಒದಗಿಸಬೇಕೆಂದು ಅವರು ಸೂಚನೆ ನೀಡಿದರು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...