ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಎಂ.ಎಸ್. ಧೋನಿ ಅಂತರರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತರಾಗಿ ಆರು ವರ್ಷಗಳ ನಂತರವೂ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ (ಐಪಿಎಲ್) ಆಡುವುದನ್ನು ಮುಂದುವರೆಸಿದ್ದಾರೆ. 43 ವರ್ಷ ವಯಸ್ಸಿನ ಧೋನಿ, ಮಕ್ಕಳಂತೆ ಕ್ರಿಕೆಟ್ ಆಡುವ ಬಯಕೆಯನ್ನು ವ್ಯಕ್ತಪಡಿಸಿದ್ದಾರೆ.
“ನಾನು 2019 ರಿಂದ ನಿವೃತ್ತನಾಗಿದ್ದೇನೆ, ಇದು ಸಾಕಷ್ಟು ಸಮಯವಾಗಿರುತ್ತದೆ. ಹೀಗಾಗಿ ನಾನು ಕೊನೆಯ ಕೆಲವು ವರ್ಷಗಳಲ್ಲಿ ಕ್ರಿಕೆಟ್ ಅನ್ನು ಆನಂದಿಸಲು ಬಯಸುತ್ತೇನೆ” ಎಂದು ಧೋನಿ ತಮ್ಮ ಅಪ್ಲಿಕೇಶನ್‌ನ ಬಿಡುಗಡೆ ಸಮಾರಂಭದಲ್ಲಿ ಬುಧವಾರ ಹೇಳಿದ್ದಾರೆ.
“ನಾನು ಶಾಲೆಯಲ್ಲಿದ್ದಾಗ, ನಾನು ವಾಸಿಸುತ್ತಿದ್ದ ಕಾಲೋನಿಯಲ್ಲಿ, ಸಂಜೆ 4 ಗಂಟೆಗೆ ಕ್ರೀಡಾ ಸಮಯವಿತ್ತು, ಆದ್ದರಿಂದ ನಾವು ಕ್ರಿಕೆಟ್ ಆಡಲು ಹೋಗುತ್ತಿದ್ದೆವು. ಹವಾಮಾನವು ಅನುಮತಿಸದಿದ್ದರೆ, ನಾವು ಫುಟ್‌ಬಾಲ್ ಆಡುತ್ತಿದ್ದೆವು. ನಾನು ಅದೇ ರೀತಿಯ ಮುಗ್ಧತೆಯಿಂದ ಆಡಲು ಬಯಸುತ್ತೇನೆ” ಎಂದು ನುಡಿದರು.
ಭಾರತ ತಂಡದ ಆಟಗಾರನಾಗಿ, ದೇಶಕ್ಕೆ ತನ್ನ ಅತ್ಯುತ್ತಮ ಪ್ರದರ್ಶನ ನೀಡಲು ಯಾವಾಗಲೂ ಗಮನ ಹರಿಸಿದ್ದೆ ಮತ್ತು ಬೇರೆ ಎಲ್ಲವೂ ದ್ವಿತೀಯ ಸ್ಥಾನದಲ್ಲಿತ್ತು ಎಂದು ಧೋನಿ ಇದೇ ಸಂದರ್ಭದಲ್ಲಿ ತಿಳಿಸಿದರು.
ಯುವ ಆಟಗಾರರಿಗೆ ಸಲಹೆ ನೀಡಿದ ಧೋನಿ, “ನಿಮಗೆ ಯಾವುದು ಒಳ್ಳೆಯದು ಎಂಬುದನ್ನು ನೀವು ಯಾವಾಗಲೂ ಕಂಡುಕೊಳ್ಳಬೇಕು. ನಾನು ಆಡುವಾಗ, ಕ್ರಿಕೆಟ್ ನನಗೆ ಎಲ್ಲವೂ ಆಗಿತ್ತು – ಬೇರೇನೂ ಮುಖ್ಯವಲ್ಲ. ನಾನು ಯಾವ ಸಮಯದಲ್ಲಿ ಮಲಗಬೇಕು ? ನಾನು ಯಾವ ಸಮಯದಲ್ಲಿ ಏಳಬೇಕು ? ಅದು (ನನ್ನ) ಕ್ರಿಕೆಟ್ ಮೇಲೆ ಯಾವ ಪರಿಣಾಮ ಬೀರಿತು ಎಂಬುದು ಮುಖ್ಯವಾದ ವಿಷಯ” ಎಂದು ಹೇಳಿದರು.