75ನೇ ಸ್ವಾತಂತ್ರ್ಯ ದಿನಾಚರಣೆಯ ಮುನ್ನ ತ್ರಿವರ್ಣ ಜಲಪಾತದ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಇದು 2020ರ ಸ್ವಾತಂತ್ರ್ಯ ದಿನದಂದು ರಾಜಸ್ಥಾನದ ಜೋಧ್‌ಪುರದಲ್ಲಿ ವಿಡಿಯೋವನ್ನು ರೆಕಾರ್ಡ್ ಮಾಡಲಾಗಿದೆ.
ಸಾಮಾಜಿಕ ಮಾಧ್ಯಮದಲ್ಲಿ ಈಗಲೂ ಟ್ರೆಂಡಿಂಗ್ ಆಗಿರುವ ಹಳೆಯ ವಿಡಿಯೋದಲ್ಲಿ, ಇಬ್ಬರು ವ್ಯಕ್ತಿಗಳು ಜಲಪಾತದ ವಿಭಿನ್ನ ಬದಿಗಳಿಂದ ಕೇಸರಿ ಮತ್ತು ಹಸಿರು ಬಣ್ಣ ಎರಚಿ ರಾಷ್ಟ್ರಧ್ವಜದ ಮೋಡಿ ಮಾಡುವ ನೋಟ ರಚಿಸುವುದನ್ನು ಕಾಣಬಹುದು.
ವಿಡಿಯೋವು ಡ್ರಮ್ಸ್‌ನಲ್ಲಿ ಸಾರೆ ಜಹಾನ್ ಸೆ ಅಚ್ಚಾ ಸಂಗೀತದೊಂದಿಗೆ ಇದೆ. ಜಲಪಾತವು ತ್ರಿವರ್ಣ ಧ್ವಜಗಳ ಬಣ್ಣಕ್ಕೆ ತಿರುಗುತ್ತಿದ್ದಂತೆ, ಸುತ್ತಲೂ ನಿಂತಿರುವ ಜನರು ಚಪ್ಪಾಳೆ ತಟ್ಟುವುದು ಮತ್ತು ವಿಜಯದ ಚಿಹ್ನೆಗಳನ್ನು ತೋರಿಸುವುದನ್ನು ಕಾಣಬಹುದು.
ಈಗ ಸರ್ಕಾರವು ಹರ್ ಘರ್ ತಿರಂಗಾ ಅಭಿಯಾನ ಪ್ರಾರಂಭಿಸಿದ. ದೇಶದ 75 ವರ್ಷಗಳ ಸ್ವಾತಂತ್ರ್ಯವನ್ನು ಸಂಭ್ರಮಿಸಲು ರಾಷ್ಟ್ರಧ್ವಜವನ್ನು ಮನೆಗಳ ಮೇಲೆ ಹಾರಿಸಲು ಜನರನ್ನು ಕೋರಲಾಗಿದೆ.
https://youtu.be/qwvb6AIU7KU