ವಾಷಿಂಗ್ಟನ್: ನಿರ್ಣಾಯಕ ಮಧ್ಯಂತರ ಚುನಾವಣೆಗೆ ಮುಂಚಿತವಾಗಿ ಅಮೆರಿಕ ಅಧ್ಯಕ್ಷ ಜೋ ಬಿಡನ್ ಅನಿಲ ಬೆಲೆಗಳನ್ನು ಕಡಿಮೆ ಮಾಡುವುದಾಗಿ ಘೋಷಿಸಿದ್ದಾರೆ.
ಪ್ರಮುಖ ನೀತಿ ಭಾಷಣದ ವೇಳೆ ಅವರು, ಅಮೆರಿಕದಲ್ಲಿ ಇಂಧನ ಬೆಲೆಗಳ ಹೆಚ್ಚಳಕ್ಕೆ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಕಾರಣ ಎಂದು ಪುನರುಚ್ಚರಿಸಿದ್ದಾರೆ.
ಗ್ಯಾಸ್ ಬೆಲೆ ಹೆಚ್ಚಾದಾಗ ಇತರ ವೆಚ್ಚಗಳು ಕಡಿತಗೊಳ್ಳುತ್ತವೆ. ಅದಕ್ಕಾಗಿಯೇ ಪುಟಿನ್ ಉಕ್ರೇನ್ ಮೇಲೆ ಆಕ್ರಮಣದಿಂದ ಈ ಬೆಲೆಗಳು ಏರಿಕೆಯಾಗುತ್ತಿವೆ. ಅಂತರರಾಷ್ಟ್ರೀಯ ತೈಲ ಮಾರುಕಟ್ಟೆಗಳಲ್ಲಿ ತಲ್ಲಣಕ್ಕೆ ಕಾರಣವಾಗಿವೆ. ಅನಿಲ ಬೆಲೆಗಳನ್ನು ಕಡಿಮೆ ಮಾಡಲು ಎಲ್ಲ ಪ್ರಯತ್ನವನ್ನೂ ಮಾಡುತ್ತಿದ್ದೇನೆ ಎಂದು ಅವರು ಭಾಷಣದಲ್ಲಿ ಹೇಳಿದರು.