ನವದೆಹಲಿ: ಧನ್ ತೇರಾಸ್ ಗೆ ಸ್ವಲ್ಪ ಮುಂಚಿತವಾಗಿ ಚಿನ್ನದ ಬೆಲೆ 1,150 ರೂ.ಗಳ ಗಣನೀಯ ಕುಸಿತ ಕಂಡಿದೆ. ಶುಕ್ರವಾರ ಪ್ರತಿ 10 ಗ್ರಾಂ ಚಿನ್ನ 80,050 ರೂ.ಗೆ ಮಾರಾಟವಾಗಿದೆ.
ಸಾಮಾನ್ಯವಾಗಿ ಚಿನ್ನಾಭರಣಗಳಿಗೆ ಹೆಚ್ಚಿನ ಬೇಡಿಕೆ ಕಾಣುವ ಹಬ್ಬದ ಋತುವಿನಲ್ಲಿ ಈ ಬೆಲೆ ಕುಸಿತದಿಂದಾಗಿ ಈಗ ಖರೀದಿ ಮಾದರಿಯಲ್ಲಿ ಬದಲಾವಣೆಯಾಗಬಹುದು. ಅಖಿಲ ಭಾರತ ಸರಾಫಾ ಅಸೋಸಿಯೇಷನ್ ಪ್ರಕಾರ, ರಾಷ್ಟ್ರ ರಾಜಧಾನಿಯಲ್ಲಿ ಚಿನ್ನದ ಬೆಲೆ 10 ಗ್ರಾಂಗೆ 1,150 ರೂ.ಗೆ ಇಳಿದು 80,050 ರೂ. ಇದೆ.
ಚಿನ್ನದ ಜೊತೆಗೆ ಬೆಳ್ಳಿ ಕೂಡ ಮಾರಾಟದ ಒತ್ತಡದಲ್ಲಿಯೇ ಉಳಿದು ಪ್ರತಿ ಕೆಜಿಗೆ 2,000 ರೂ. ಕಡಿಮೆಯಾಗಿ 99,000 ರೂ.ಗೆ ಇಳಿಕೆಯಾಗುವ ಮೂಲಕ 1 ಲಕ್ಷ ರೂ. ಗಡಿಗಿಂತ ಕಡಿಮೆಯಾಗಿದೆ. ಗುರುವಾರದ ಹಿಂದಿನ ಮುಕ್ತಾಯದಲ್ಲಿ ಬೆಳ್ಳಿ ದರ ಪ್ರತಿ ಕೆಜಿಗೆ 1.01 ಲಕ್ಷ ರೂ. ಇತ್ತು.
99.5 ರಷ್ಟು ಶುದ್ಧತೆಯ ಚಿನ್ನವು ಹಿಂದಿನ 80,800 ರೂ.ಗೆ ಪ್ರತಿ 10 ಗ್ರಾಂಗೆ 350 ರೂ. ಇಳಿಕೆಯಾಗಿದ್ದು 80,450 ರೂ.ಗೆ ಮಾರಾಟವಾಗಿದೆ. ಆದರೆ, 99.9 ಪ್ರತಿಶತ ಶುದ್ಧತೆಯ ಚಿನ್ನ 1,150ರೂ. ಕಡಿಮೆಯಾಗಿ 81,200 ರೂ.ನಿಂದ 80,050 ರೂ.ಗೆ ಇಳಿದಿದೆ.
ಸ್ಥಳೀಯ ಮಾರುಕಟ್ಟೆಯಲ್ಲಿ ಚಿನ್ನಾಭರಣ ವ್ಯಾಪಾರಿಗಳು ಮತ್ತು ಚಿಲ್ಲರೆ ವ್ಯಾಪಾರಿಗಳಿಂದ ಬೇಡಿಕೆಯಿಲ್ಲದಿರುವುದು ಚಿನ್ನದ ಬೆಲೆಯಲ್ಲಿ ಇಳಿಕೆಯಾಗಲು ಕಾರಣವೆನ್ನಲಾಗಿದೆ.