ಉಡುಪಿ: ಮಲೆನಾಡು ಕರಾವಳಿ ಜಿಲ್ಲೆಗಳ ಸಂಪರ್ಕದ ಪ್ರಮುಖ ರಸ್ತೆಯಾದ ಆಗುಂಬೆ ಘಾಟಿಯಲ್ಲಿ ಭಾರಿ ವಾಹನ ಸಂಚಾರ ನಿಷೇಧಿಸಲಾಗಿದೆ.
ರಾಷ್ಟ್ರೀಯ ಹೆದ್ದಾರಿ 169 ಎ ಆಗುಂಬೆ ಘಾಟಿ ರಸ್ತೆಯಲ್ಲಿ ಅಕ್ಟೋಬರ್ 15 ರವರೆಗೆ ಭಾರಿ ವಾಹನಗಳ ಸಂಚಾರ ನಿಷೇಧಿಸಿ ಆದೇಶ ಹೊರಡಿಸಲಾಗಿದೆ. 12 ಟನ್ ಗಿಂತ ಅಧಿಕ ಭಾರದ ವಾಹನಗಳು ಸಂಚರಿಸುವಂತಿಲ್ಲ. ಮಳೆಗಾಲದಲ್ಲಿ, ಭಾರಿ ಸರಕು ಸಾಗಾಟ ವಾಹನಗಳ ಸಂಚಾರದಿಂದ ಭೂಕುಸಿತ ಉಂಟಾಗುವ ಸಾಧ್ಯತೆ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.
ಶಿವಮೊಗ್ಗ ಕಡೆಗೆ ತೆರಳುವ ವಾಹನಗಳು ಉಡುಪಿ –ಸಿದ್ದಾಪುರ- ಹೊಸಂಗಡಿ ಬಾಳೆಬರೆ ಘಾಟಿ ಮಾರ್ಗವಾಗಿ ಶಿವಮೊಗ್ಗಕ್ಕೆ ತೆರಳುವುದು. ಮಂಗಳೂರು ಕಡೆಯಿಂದ ಸಂಚರಿಸುವ ವಾಹನಗಳು ಕಾರ್ಕಳ –ಹೆಬ್ರಿ –ಸಿದ್ಧಾಪುರ –ಹೊಸಂಗಡಿ ಬಾಳೆಬರೆ ಘಾಟಿ ಮಾರ್ಗವಾಗಿ ಶಿವಮೊಗ್ಗಕ್ಕೆ ತಲುಪಬಹುದು ಎಂದು ಹೇಳಲಾಗಿದೆ.