alex Certify ರೈತರ ಸಮಸ್ಯೆ ಪರಿಹಾರಕ್ಕೆ ಬರಲಿದೆ AI ಆಪ್; 14 ಭಾಷೆಗಳಲ್ಲಿ ಕಾರ್ಯನಿರ್ವಹಣೆ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರೈತರ ಸಮಸ್ಯೆ ಪರಿಹಾರಕ್ಕೆ ಬರಲಿದೆ AI ಆಪ್; 14 ಭಾಷೆಗಳಲ್ಲಿ ಕಾರ್ಯನಿರ್ವಹಣೆ…!

ಬೆಂಗಳೂರು: ಕೃಷಿ ಇಲಾಖೆ ರೈತರ ಸಮಸ್ಯೆಗೆ ಒಂದೇ ವೇದಿಕೆಯಲ್ಲಿ ಪರಿಹಾರ ನೀಡುವ ನಿಟ್ಟಿನಲ್ಲಿ ಕೃತಕ ಬುದ್ಧಿಮತ್ತೆ ಆಧಾರಿತ ಆಪ್ ಸಿದ್ಧಪಡಿಸಿದ್ದು, ಶೀಘ್ರವೇ ಬಿಡುಗಡೆಯಾಗಲಿದೆ.

ಈ ಬಗ್ಗೆ ಕೃಷಿ ಸಚಿವ ಚಲುವರಾಯಸ್ವಾಮಿ ಮಾಹಿತಿ ನೀಡಿದ್ದು, ರೈತರಿಗಾಗಿ AI-Artificial intelligence ಆಧಾರಿತ ಆಪ್ ನ್ನು ಅತೀ ಶೀಘ್ರದಲ್ಲಿ ಬಿಡುಗಡೆ ಮಾಡಲಾಗುವುದು. ಹವಾಮಾನ, ಮಣ್ಣಿನ ಗುಣಮಟ್ಟ ಹಾಗೂ ಬೀಜಗಳು, ಬೆಳೆ ಮಾದರಿ ಸೇರಿದಂತೆ ರೈತರಿಗೆ ಮಾಹಿತಿ ನೀಡುವ ನಿಟ್ಟಿನಲ್ಲಿ ಈ ಎಐ ಆಪ್ ಕಾರ್ಯನಿರ್ವಹಿಸಲಿದೆ.

ಕೃಷಿಗೆ ಸಂಬಂಧಿಸಿದ ಪ್ರತಿಯೊಂದು ಅಂಶವೂ ಈ ಅಪ್ಲಿಕೇಷನ್ ನಲ್ಲಿರಲಿದೆ. ಇದು ರೈತರಿಗೆ ಅಗತ್ಯಗಳಿಗೆ ಅನುಗುಣವಾಗಿ ಮಾಹಿತಿ ಒದಗಿಸಲಿದೆ. ಈ ಆಪ್ 4 ಭಾಷೆಗಳಲ್ಲಿ ಕಾರ್ಯನಿರ್ವಹಿಸಲಿದೆ ಎಂದು ತಿಳಿಸಿದ್ದಾರೆ.

ಇನ್ನು ರೈತರ ಅನುಕೂಲಕ್ಕಾಗಿ ಆರಂಭವಾಗಿದ್ದ 8 ಸಹಾಯವಾಣಿಗಳಿಂದ ಹಲವು ಗೊಂದಲವುಂಟಾದ ಕಾರಣಕ್ಕೆ ಎಲ್ಲಾ ಸಾಹಾಯಣಿಯನ್ನು ವಿಲೀನಗೊಳಿಸಿ ಕಾಲ್ ಸೆಂಟರ್ ಸ್ಥಾಪನೆಗೆ ನಿರ್ಧರಿಸಿದ್ದು, ಮೊದಲ ಹಂತದಲ್ಲಿ 30 ಉದ್ಯೋಗಿಗಳನ್ನು ನೇಮಕ ಮಾಡಲಾಗುವುದು ಎಂದು ವಿವರಿಸಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...