ಬೆಂಗಳೂರು: ಶೀಘ್ರದಲ್ಲಿಯೇ ಕೃಷಿ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿ ಮಾಡಲಾಗುವುದು ಎಂದು ಕೃಷಿ ಸಚಿವ ಚಲುವರಾಯಸ್ವಾಮಿ ತಿಳಿಸಿದ್ದಾರೆ.
ಕೃಷಿ ಮೇಳದಲ್ಲಿಯೇ ಬರೋಬ್ಬರಿ 150 ಕೋಟಿ ಮೌಲ್ಯದ 41 ಒಪ್ಪಂದಗಳು ಆಗಿದ್ದು, 2.34 ಲಕ್ಷ ಫಲಾನುಭವಿಗಳಿಗೆ 484 ಕೋಟಿ ಸಹಾಯಧನ ನೀಡಲಾಗಿದೆ. ಸಿರಿಧಾನ್ಯಗಳ ಉತ್ಪಾದನೆ ಹೆಚ್ಚಿಸಲು 8,521 ರೈತರಿಗೆ 8.56 ಕೋಟಿಗಳನ್ನು ಡಿಬಿಟಿ ಮೂಲಕ ಪಾವತಿಸಲಾಗಿದೆ ಎಂದರು.
ಕೃಷಿ ಇಲಾಖೆಯಲ್ಲಿ ನೇಮಕಾತಿ ಸಮಸ್ಯೆ ಇತ್ತು. ಇದೀಗ ಬಗೆಹರಿದಿದ್ದು, 750 ಜನರ ನೇಮಕಾತಿಗೆ ಅನುಮೋದನೆ ಕೊಡಲಾಗಿದೆ. ಇಲಾಖೆ ಅಧಿಕಾರಿಗಳ ಜೊತೆ ಸಭೆ ನಡೆಸಲಾಗಿದ್ದು, 100 ಕೃಷಿ ಅಧಿಕಾರಿಗಳು, 650 ಸಹಾಯಕ ಕೃಷಿ ಅಧಿಕಾರಿಗಳನ್ನು ನೇಮಕ ಮಾಡಿಕೊಳ್ಳಲು ತೀರ್ಮಾನಿಸಲಾಗಿದೆ ಎಂದರು.
ಇದರ ಜೊತೆಗೆ 582 ಹುದ್ದೆಗಳಿಗೆ ಮುಂಬಡ್ತಿ ಕೊಟ್ಟಿದ್ದು, ಈ ಮೂಲಕ ಅಧಿಕಾರಿಗಳಿಗೆ ಉತ್ಸಾಹ ತುಂಬಲು ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.