
ಇದಕ್ಕೆ ಪುಷ್ಠಿ ನೀಡುವಂತೆ ಉತ್ತರ ಪ್ರದೇಶದ ಆಗ್ರಾದಲ್ಲಿ ನಡೆದಿರುವ ಘಟನೆ ಎಲ್ಲರನ್ನೂ ಬೆಚ್ಚಿ ಬೀಳಿಸಿದೆ. ಸ್ಕೂಟಿಯಲ್ಲಿ ತೆರಳುತ್ತಿದ್ದ ಯುವತಿಯನ್ನು ಎರಡು ಬೈಕುಗಳಲ್ಲಿ ಆರು ಮಂದಿ ಇದ್ದ ಪುಂಡರ ತಂಡ ಬೆನ್ನತ್ತಿದ್ದು ಸಾರ್ವಜನಿಕರ ಸಮ್ಮುಖದಲ್ಲೇ ಇಂತಹದೊಂದು ಹೇಯ ಘಟನೆ ನಡೆದಿದೆ. ಯುವತಿ ಚಲಾಯಿಸುತ್ತಿದ್ದ ಸ್ಕೂಟಿ ಅಕ್ಕಪಕ್ಕದಲ್ಲಿಯೇ ತಮ್ಮ ಬೈಕ್ ಓಡಿಸಿಕೊಂಡು ಹೋದ ಈ ಪುಂಡರು ಆಕೆಯನ್ನು ಚುಡಾಯಿಸುತ್ತಾ ಸಾಗಿದ್ದಾರೆ.
ಅಷ್ಟೇ ಅಲ್ಲ, ಒಂದು ಹಂತದಲ್ಲಿ ಯುವತಿ ಚಲಾಯಿಸುತ್ತಿದ್ದ ಸ್ಕೂಟಿಯನ್ನು ಅಡ್ಡಗಟ್ಟಿ ಆಕೆಯನ್ನು ಅಪಹರಿಸಲು ಸಹ ಯತ್ನಿಸಿದರು ಎಂದು ಹೇಳಲಾಗುತ್ತಿದೆ. ಈ ಪುಂಡರ ಗುಂಪು ಯುವತಿಯನ್ನು ಬೆಂಬತ್ತಿ ಚುಡಾಯಿಸುತ್ತಾ ಸಾಗಿರುವ ದೃಶ್ಯವನ್ನು ವ್ಯಕ್ತಿಯೊಬ್ಬರು ತಮ್ಮ ಮೊಬೈಲ್ ನಲ್ಲಿ ಸೆರೆ ಹಿಡಿದು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ. ಜನನಿಬಿಡ ಮುಖ್ಯರಸ್ತೆಯಲ್ಲೇ ಈ ಘಟನೆ ನಡೆದಿರುವುದನ್ನು ಗಮನಿಸಿರುವ ನೆಟ್ಟಿಗರು, ಪೊಲೀಸರು ಕೂಡಲೇ ಬೈಕಿನಲ್ಲಿದ್ದ ಪುಂಡರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.