ಉತ್ತರ ಪ್ರದೇಶದ ಆಗ್ರಾದಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದೆ. ಕಾರು ಚಾಲಕನೊಬ್ಬ ಟೋಲ್ ಸಿಬ್ಬಂದಿಯನ್ನು ತನ್ನ ಕಾರಿನ ಬಾನೆಟ್ ಮೇಲೆ ಒಂದು ಕಿಲೋಮೀಟರ್‌ಗಿಂತಲೂ ಹೆಚ್ಚು ದೂರ ಎಳೆದೊಯ್ದು ನಂತರ ರಸ್ತೆಯ ಬದಿಗೆ ಎಸೆದಿದ್ದಾನೆ. ಖಂಡೌಲಿ ಟೋಲ್ ಪ್ಲಾಜಾದಲ್ಲಿ ಫಾಸ್ಟ್‌ಟ್ಯಾಗ್ ಕಪ್ಪುಪಟ್ಟಿಯಲ್ಲಿದ್ದ ಕಾರಣ ಟೋಲ್ ಶುಲ್ಕವನ್ನು ಸಿಬ್ಬಂದಿ ಕೇಳಿದ್ದಕ್ಕೆ ಈ ಘಟನೆ ಸಂಭವಿಸಿದೆ.
ಟೋಲ್ ಸಿಬ್ಬಂದಿ ಚಾಲಕನ ಬಳಿ ಫಾಸ್ಟ್‌ಟ್ಯಾಗ್ ಬಗ್ಗೆ ವಿಚಾರಿಸಿದ್ದಾರೆ. ಇದರಿಂದ ಕೋಪಗೊಂಡ ಚಾಲಕ, ಸಿಬ್ಬಂದಿಯನ್ನು ಕೊಲ್ಲಲು ಯತ್ನಿಸಿದ್ದು, ಸಿಬ್ಬಂದಿ ಬಾನೆಟ್ ಮೇಲೆ ಹಾರುವ ಮೂಲಕ ಪ್ರಾಣ ಉಳಿಸಿಕೊಂಡಿದ್ದಾರೆ. ಚಾಲಕ ಅಲ್ಲಿಂದ ವೇಗವಾಗಿ ಪರಾರಿಯಾಗಿದ್ದಾನೆ. ಈ ಘಟನೆಯ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.
ಘಟನೆಯ ಕುರಿತು ಮಾಹಿತಿ ತಿಳಿದ ನಂತರ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಖಂಡೌಲಿ ಪೊಲೀಸ್ ಠಾಣಾ ತಂಡವು ಪ್ರಕರಣವನ್ನು ಕೈಗೆತ್ತಿಕೊಂಡಿದೆ. ಗಂಭೀರವಾಗಿ ಗಾಯಗೊಂಡ ಟೋಲ್ ಸಿಬ್ಬಂದಿಗೆ ಚಿಕಿತ್ಸೆ ನೀಡಲಾಗುತ್ತಿದೆ.
आगरा (उत्तर प्रदेश) में कार चालक ने टोल कर्मचारी को एक किलोमीटर तक बोनट पर घसीटा और फिर सड़क किनारे फेंक दिया, जिससे वह गंभीर रूप से घायल हो गया,
कार चालक का फास्टैग ब्लैक लिस्ट में था। जब टोल कर्मचारी ने उससे पैसे मांगे तो वह गुस्सा हो गया और उसने कर्मचारी पर गाड़ी चढ़ाने की… pic.twitter.com/DdfctLHnqj
— Madan Mohan Soni (आगरा वासी) (@madanjournalist) January 31, 2025