ರೈಲು ನಿಲ್ದಾಣದೊಳಗೆ ಇರುವ 250 ವರ್ಷದಷ್ಟು ಹಳೆಯದಾಗಿರುವ ಚಾಮುಂಡ ದೇವಿ ದೇವಾಲಯವನ್ನು ಸ್ಥಳಾಂತರ ಮಾಡಿದರೆ ಸಾಮೂಹಿಕ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಬೆದರಿಕೆ ಹಾಕಿದ್ದಾರೆ.
ಆಗ್ರಾದ ರಾಜಾ ಕಿ ಮಂಡಿ ರೈಲು ನಿಲ್ದಾಣದಲ್ಲಿ ಈ ದೇವಾಲಯವಿದೆ. ಇದಕ್ಕೆ ಸಂಬಂಧಿಸಿದಂತೆ ರೈಲ್ವೆ ಇಲಾಖೆ ಏಪ್ರಿಲ್ 20 ರಂದು ನೊಟೀಸ್ ಜಾರಿ ಮಾಡಿ, ರೈಲ್ವೆ ನಿಲ್ದಾಣದೊಳಗೆ ಇರುವ ದೇವಾಲಯವನ್ನು ಸ್ಥಳಾಂತರ ಮಾಡುವಂತೆ ಸೂಚನೆ ನೀಡಿದೆ.
ಅಲ್ಲದೇ, ಆಗ್ರಾ ಕಂಟೋನ್ಮೆಂಟ್ ರೈಲ್ವೆ ನಿಲ್ದಾಣದಲ್ಲಿರುವ ಭೂರೆ ಶಾ ಬಾಬಾ ದರ್ಗಾ ಮತ್ತು ಮಸೀದಿಯನ್ನೂ ಸ್ಥಳಾಂತರ ಮಾಡುವಂತೆಯೂ ರೈಲ್ವೆ ಇಲಾಖೆ ನೊಟೀಸ್ ಜಾರಿಗೊಳಿಸಿದೆ.
BIG BREAKING: ಕೊಳದ ಮಠದ ಡಾ. ಶಾಂತವೀರ ಸ್ವಾಮೀಜಿ ಹೃದಯಾಘಾತದಿಂದ ವಿಧಿವಶ
ಒತ್ತುವರಿ ತೆರವುಗೊಳಿಸುವಂತೆ ಸುಪ್ರೀಂ ಕೋರ್ಟ್ ನೀಡಿರುವ ಆದೇಶವನ್ನು ಪಾಲಿಸುವ ನಿಟ್ಟಿನಲ್ಲಿ ದೇವಾಲಯ ಮತ್ತು ದರ್ಗಾಕ್ಕೆ ನೊಟೀಸ್ ಜಾರಿ ಮಾಡಲಾಗಿದೆ ಎಂದು ರೈಲ್ವೆ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಆದರೆ, ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿರುವ ರಾಷ್ಟ್ರೀಯ ಹಿಂದೂ ಪರಿಷದ್ ಭಾರತ್ ನ ರಾಷ್ಟ್ರೀಯ ಅಧ್ಯಕ್ಷ ಗೋವಿಂದ ಪರಾಶರ್, ಬ್ರಿಟಿಷರ ಕಾಲದಲ್ಲಿ ನಿರ್ಮಾಣವಾಗಿರುವ ಪುರಾತನ ಕಾಲದ ದೇವಾಲಯವನ್ನು ಸ್ಥಳಾಂತರ ಮಾಡಲು ಬಿಡುವುದಿಲ್ಲ. ಹಾಗೊಂದು ವೇಳೆ ಸ್ಥಳಾಂತರ ಮಾಡಿದರೆ ಸಂಘಟನೆಯ ಸದಸ್ಯರು ಸಾಮೂಹಿಕ ಆತ್ಮಹತ್ಯೆ ಮಾಡಿಕೊಳ್ಳಬೇಕಾದೀತು ಎಂದು ಎಚ್ಚರಿಕೆ ನೀಡಿದ್ದಾರೆ.