ಹತ್ತೊಂಬತ್ತು ವರ್ಷದ ಯುವತಿಯೊಬ್ಬಳು ಟಾಯ್ಲೆಟ್ ಕ್ಲೀನರ್ ಕುಡಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಉತ್ತರ ಪ್ರದೇಶದ ಆಗ್ರಾ ಜಿಲ್ಲೆಯಲ್ಲಿ ನಡೆದಿದೆ. ಹನ್ನೆರಡನೇ ತರಗತಿ ಓದುತ್ತಿದ್ದ ಈಕೆ, ಸ್ಥಳೀಯ ಮೂರು ಜನ ಪುರುಷರ ಮಾನಸಿಕ ಕಿರುಕುಳವೇ ಸಾವನ್ನಪ್ಪಲು ಕಾರಣವೆನ್ನಲಾಗಿದೆ.
ಯುವತಿಯ ತಂದೆಯ ಪ್ರಕಾರ, ಇವರ ನೆರೆಯವರಾದ ಚಂದ್ರಭಾನ್, ಅವನ ಮಗ ಟೀಟು ಮತ್ತು ಸ್ಥಳೀಯ ವಿಜಯ್ ಎಂಬುವವರು ಈಕೆ ಹೋಗಿ ಬರುವ ದಾರಿಯಲ್ಲಿ
ಅಸಭ್ಯವಾಗಿ ಮಾತನಾಡುತ್ತಿದ್ದರು ಎನ್ನಲಾಗಿದೆ. ಇವಳನ್ನು ಅಪಹರಣ ಕೂಡ ಮಾಡುವುದಾಗಿ ಬೆದರಿಕೆಯೊಡ್ಡಿದ್ದರು. ಇದರಿಂದಾಗಿ ಈಕೆ ಮಾನಸಿಕವಾಗಿ ಜರ್ಜರಿತಳಾಗಿದ್ದಳು. ಈ ಬಗ್ಗೆ ಪೊಲೀಸರಿಗೆ ದೂರನ್ನು ನೀಡಿದ್ದರು ಪ್ರಯೋಜನವಾಗಿರಲಿಲ್ಲ. ಇದರಿಂದ ಈಕೆ ಟಾಯ್ಲೆಟ್ ಕ್ಲೀನರ್ ಕುಡಿದು ಗುರುವಾರ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಳು, ಮರುದಿನ ಚಿಕಿತ್ಸೆ ಫಲಕಾರಿಯಾಗದೆ ಅಸುನೀಗಿದ್ದಾಳೆ
ಟೋಕಿಯೊ ಪ್ಯಾರಾಲಿಂಪಿಕ್ಸ್ ನಲ್ಲಿ ಭಾರತಕ್ಕೆ ಮತ್ತೆರಡು ಮೆಡಲ್; ಮನೀಶ್ ನರ್ವಾಲ್ ಚಿನ್ನ, ಸಿಂಗರಾಜ್ ಗೆ ಬೆಳ್ಳಿ ಗೆದ್ದರು
ತಂದೆಯ ದೂರಿನ ಮೇಲೆ ಸೆಕ್ಷನ್ 306 (ಆತ್ಮಹತ್ಯೆಗೆ ಕುಮ್ಮಕ್ಕು ನೀಡುವುದು ) ಮತ್ತು ಸೆಕ್ಷನ್ 511 ಕೇಸ್ ದಾಖಲಿಸಿದ್ದಾರೆ. ಯುವತಿಯ ಶವವನ್ನು ಶವ ಪರೀಕ್ಷೆಗೆ ಕಳುಹಿಸಲಾಗಿದೆ. ಈಗಾಗಲೇ ಚಂದ್ರಬಾನ್ ಮತ್ತು ವಿಜಯ್ ಇವರನ್ನು ಬಂಧಿಸಲಾಗಿದ್ದು, ಮತ್ತೋರ್ವ ಆರೋಪಿ ಟೀಟೂಗಾಗೆ ಹುಡುಕುತ್ತಿದ್ದಾರೆ.
ಮತ್ತೊಂದು ಘಟನೆಯಲ್ಲಿ, 25 ವರ್ಷದ ಮಹಿಳೆಯೊಬ್ಬಳು ಉತ್ತರಪ್ರದೇಶದ ಮುಜಾಫರ್ ನಗರದಲ್ಲಿ ಪತಿಯು ಮೂರು ಬಾರಿ ತಲಾಕ್ ಹೇಳಿ, ಆಕೆಯ ಖಾಸಗಿ ವಿಡಿಯೋ ಒಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದಕ್ಕೆ ನೊಂದು, ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಆಗಸ್ಟ್ 18 ರಂದು ಮಹಿಳೆಯು ತನ್ನ ಪತಿ ತ್ರಿವಳಿ ತಲಾಕ್ ನೀಡಿದನ್ನು ಪ್ರಶ್ನಿಸಿ ಪೊಲೀಸರಿಗೆ ದೂರು ದಾಖಲು ಮಾಡಿದ್ದರು ಹಾಗೂ ತನ್ನ ಮಗುವನ್ನು ತನ್ನಿಂದ ದೂರ ಮಾಡುತ್ತಿದ್ದಾರೆ ಎಂದು ಹೇಳಿದ್ದರು.