ಉತ್ತರ ಪ್ರದೇಶದ ಆಗ್ರಾದಲ್ಲಿ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ. ನಾಲ್ವರು ಅಪರಿಚಿತರು ನನ್ನ ಮೇಲೆ ಹಲ್ಲೆ ಮಾಡಿ, ನನ್ನನ್ನು ಜೀವಂತ ಸಮಾಧಿ ಮಾಡಿದ್ರು ಎಂದು ವ್ಯಕ್ತಿಯೊಬ್ಬ ಆರೋಪ ಮಾಡಿದ್ದಾನೆ.
ಪೊಲೀಸರಿಗೆ ದೂರು ನೀಡಿರುವ ವ್ಯಕ್ತಿ, ಬೀದಿ ನಾಯಿಗಳು ತನ್ನ ಪ್ರಾಣ ಉಳಿಸಿವೆ ಎಂದಿದ್ದಾನೆ. ಹಸಿ ಮಣ್ಣು ನೋಡಿದ ನಾಯಿಗಳು ಮಣ್ಣನ್ನು ಅಗೆದಿವೆ. ಈ ಸಮಯದಲ್ಲಿ ನನಗೆ ಪ್ರಜ್ಞೆ ಬಂದಿದ್ದು, ನಾನು ಅಲ್ಲಿಂದ ತಪ್ಪಿಸಿಕೊಂಡು ಬಂದಿದ್ದೇನೆ ಎಂದಿದ್ದಾನೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ವಿಚಾರಣೆ ಶುರು ಮಾಡಿದ್ದಾರೆ.
ರೂಪ್ ಕಿಶೋರ್ ಹೆಸರು ವ್ಯಕ್ತಿ, ಅಂಕಿತ್, ಗೌರವ್, ಕರಣ್ ಮತ್ತು ಆಕಾಶ್ ಹೆಸರಿನ ನಾಲ್ವರು ನಮ್ಮ ಮನೆಗೆ ಬಂದಿದ್ದರು. ನನ್ನ ಜೊತೆ ಗಲಾಟೆ ಮಾಡಿ, ನನ್ನ ಕತ್ತು ಹಿಸುಕಿದ್ದಾರೆ. ನಾನು ಸಾವನ್ನಪ್ಪಿದ್ದೇನೆಂದು ಭಾವಿಸಿ ನನ್ನನ್ನು ಜೀವಂತ ಹೂಳಿದ್ದಾರೆ. ಆದ್ರೆ ಬೀದಿ ನಾಯಿಗಳು ಮಣ್ಣನ್ನು ಅಗೆದಿವೆ. ಅವರಿಂದ ನನಗೆ ಪ್ರಜ್ಞೆ ಬಂದಿದ್ದು, ಪ್ರಾಣ ರಕ್ಷಣೆಗೆ ನಾನು ಹತ್ತಿರವಿದ್ದ ಗ್ರಾಮಕ್ಕೆ ಓಡಿದ್ದೆ. ಸ್ಥಳೀಯರು ನನ್ನನ್ನು ಆಸ್ಪತ್ರೆಗೆ ಸೇರಿಸಿದ್ದರು ಎಂದು ರೂಪ್ ಕಿಶೋರ್ ಹೇಳಿದ್ದಾನೆ.
ರೂಪ್ ಕಿಶೋರ್ ತಾಯಿ ಕೂಡ ಇದೇ ವಿಷ್ಯವನ್ನು ಹೇಳಿದ್ದು, ಆತ ಹಿಂದಿನ ದಿನ ನಾಲ್ಕೈದು ಜನರ ಜೊತೆ ಜಗಳವಾಡಿದ್ದ. ನಂತರ ಮನೆಗೆ ಬಂದ ಯುವಕರು ಮಗನನ್ನು ಹೊಡೆದು ಬಲವಂತವಾಗಿ ಕರೆದೊಯ್ದಿದ್ದರು ಎಂದಿದ್ದಾಳೆ.