
ನವದೆಹಲಿ: ದೇಶದಲ್ಲಿ ಹೊಸದಾಗಿ ಜಾರಿಗೊಳಿಸಲಾಗಿರುವ ಅಗ್ನಿಪಥ್ ಯೋಜನೆಯಡಿ ಅಗ್ನಿವೀರರ ನೇಮಕಾತಿಗೆ ಯುವಕರಿಂದ ಭಾರಿ ಸ್ಪಂದನೆ ವ್ಯಕ್ತವಾಗಿದೆ.
ಭಾರತೀಯ ಸೇನೆಗೆ ನಾಲ್ಕು ವರ್ಷದ ಅವಧಿಗೆ ಅಗ್ನಿವೀರರನ್ನು ನೇಮಕಾತಿ ಮಾಡುವುದನ್ನು ವಿರೋಧಿಸಿ ದೇಶದಾದ್ಯಂತ ಪ್ರತಿಭಟನೆಗಳು ನಡೆಯುತ್ತಿವೆ. ಇದೇ ಸಂದರ್ಭದಲ್ಲಿ ನೇಮಕಾತಿ ನೋಂದಣಿ ಆರಂಭವಾಗಿದ್ದು, ಮೂರು ಸಾವಿರ ಹುದ್ದೆಗಳಿಗೆ 56000 ಅರ್ಜಿ ಸಲ್ಲಿಕೆಯಾಗಿವೆ. ಜುಲೈ 5ರವರೆಗೆ ಅರ್ಜಿ ಸಲ್ಲಿಕೆಗೆ ಅವಕಾಶ ನೀಡಲಾಗಿದೆ.