alex Certify ಲಸಿಕೆಗೆ ನೂಕುನುಗ್ಗಲು, 18 ವರ್ಷ ಮೇಲ್ಪಟ್ಟವರಿಗೆ ನಾಳೆಯಿಂದಲ್ಲ, ಮೇ 3 ನೇ ವಾರದಿಂದ ವ್ಯಾಕ್ಸಿನ್ ನೀಡಿಕೆ ಸಾಧ್ಯತೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಲಸಿಕೆಗೆ ನೂಕುನುಗ್ಗಲು, 18 ವರ್ಷ ಮೇಲ್ಪಟ್ಟವರಿಗೆ ನಾಳೆಯಿಂದಲ್ಲ, ಮೇ 3 ನೇ ವಾರದಿಂದ ವ್ಯಾಕ್ಸಿನ್ ನೀಡಿಕೆ ಸಾಧ್ಯತೆ

ನವದೆಹಲಿ: ಮೇ 1 ರಿಂದ 18 ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೀಡುವ ಬದಲು ಮೇ ಮೂರನೇ ವಾರ ಲಸಿಕೆ ನೀಡಿಕೆ ಆರಂಭಿಸಲಾಗುತ್ತದೆ ಎನ್ನಲಾಗಿದೆ.

ಲಸಿಕೆಗೆ ಭಾರಿ ಬೇಡಿಕೆ ಉಂಟಾಗಿ ಕೊರತೆ ಭೀತಿಯಿಂದ ಜನ ಲಸಿಕೆ ಪಡೆಯಲು ಮುಗಿಬಿದ್ದಿದ್ದಾರೆ. ಮೇ 1 ರಿಂದ 18 ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೀಡಿಕೆ ಆರಂಭವಾದರೂ ಅನೇಕ ರಾಜ್ಯಗಳಲ್ಲಿ ಲಸಿಕೆ ಪೂರೈಕೆಯಾಗದ ಕಾರಣ ಮೇ ಮೂರನೇ ವಾರದಿಂದ ಲಸಿಕೆ ನೀಡಲಾಗುತ್ತದೆ ಎನ್ನಲಾಗಿದೆ.

ರಾಜ್ಯದಲ್ಲಿಯೂ 18 ವರ್ಷ ಮೇಲ್ಪಟ್ಟವರಿಗೆ ಮೇ 1ರಿಂದ ಲಸಿಕೆ ನೀಡುವ ಅಭಿಯಾನ ಆರಂಭವಾಗಲಿದ್ದರೂ, ಮೇ 3 ನೇ ವಾರದಿಂದ ನೀಡುವ ಸಾಧ್ಯತೆ ಇದೆ. ಸರ್ಕಾರ ಒಂದು ಕೋಟಿ ಲಸಿಕೆ ಖರೀದಿಗೆ ಆದೇಶಿಸಿದೆ. ಮತ್ತೆ ಒಂದು ಕೋಟಿ ಲಸಿಕೆ ಖರೀದಿಸಲು ಸಿಎಂ ಸೂಚನೆ ನೀಡಿದ್ದು, ಹೆಚ್ಚುವರಿ ಲಸಿಕೆ ಖರೀದಿಗೆ ಕ್ರಮಕೈಗೊಳ್ಳಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...