ನವದೆಹಲಿ: ದೆಹಲಿ ಸರ್ಕಾರದ ವತಿಯಿಂದ ಅಬಕಾರಿ ಆದಾಯ ಹೆಚ್ಚಿಸುವ ಮಾರ್ಗಗಳನ್ನು ಸೂಚಿಸುವಂತೆ ರಚನೆ ಮಾಡಲಾಗಿದ್ದ ಸಮಿತಿಯು ಮದ್ಯಪಾನಕ್ಕೆ ಕನಿಷ್ಠ ವಯಸ್ಸು ಇಳಿಕೆಗೆ ಸಲಹೆ ನೀಡಿದೆ.
ಅಬಕಾರಿ ಆದಾಯ ಹೆಚ್ಚಿಸಲು ಮದ್ಯಪಾನ ಮಾಡಲು ಇರುವ ಕಾನೂನುಬದ್ಧ ವಯಸ್ಸನ್ನು 25 ವರ್ಷದಿಂದ 21 ವರ್ಷಕ್ಕೆ ಇಳಿಸಬೇಕು ಎಂದು ಹೇಳಲಾಗಿದೆ.
ಡಿಪಾರ್ಟ್ಮೆಂಟ್ ಸ್ಟೋರ್ ಗಳಲ್ಲಿಯೂ ಬಿಯರ್ ಮತ್ತು ವೈನ್ ಮಾರಾಟಕ್ಕೆ ಅವಕಾಶ ಕಲ್ಪಿಸಬೇಕು. ಸರ್ಕಾರ ನಡೆಸುವ ಮದ್ಯದ ಅಂಗಡಿಗಳಿಗೆ ಸಮಾನವಾಗಿ ಸರಕು ವಿತರಿಸಬೇಕು. ಗಾಂಧಿ ಜಯಂತಿ, ಸ್ವಾತಂತ್ರ್ಯ ದಿನಾಚರಣೆ, ಗಣರಾಜ್ಯೋತ್ಸವ ದಿನಗಳನ್ನು ಹೊರತುಪಡಿಸಿ ಉಳಿದ ದಿನಗಳಲ್ಲಿ ಮದ್ಯ ಮಾರಾಟಕ್ಕೆ ಅವಕಾಶ ನೀಡಬೇಕೆಂದು ಹೇಳಲಾಗಿದೆ. ಸಮಿತಿ ನೀಡಿದ ಸಲಹೆಗಳನ್ನು ದೆಹಲಿ ಸರ್ಕಾರ ಪರಿಗಣಿಸುತ್ತಿದೆ ಎಂದು ಹೇಳಲಾಗಿದೆ.