
ಅಂಥದ್ದೇ ಒಂದು ವೃದ್ಧನ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಮಳೆಯಲ್ಲಿ ಜನನಿಬಿಡ ರಸ್ತೆಯ ಮೂಲಕ ವೃದ್ಧನೊಬ್ಬ ಕೈ ಬಿಟ್ಟು ಸೈಕಲ್ ಮೇಲೆ ಸಾಹಸ ಮಾಡುವ ವಿಡಿಯೋ ಇದಾಗಿದೆ.
ಜಿಂದಗಿ ಗುಲ್ಜಾರ್ ಹೈ ಎಂಬ ಟ್ವಿಟ್ಟರ್ ಬಳಕೆದಾರರು ಇದರ ವಿಡಿಯೋ ಶೇರ್ ಮಾಡಿಕೊಂಡಿದ್ದಾರೆ. ಬಿಳಿ ಉಡುಪಿನಲ್ಲಿ ಇರುವ ವೃದ್ಧನೊಬ್ಬ ಮಳೆಯಲ್ಲಿ ಬೈಸಿಕಲ್ ಸವಾರಿ ಮಾಡುವಾಗ ಸಾಹಸಗಳನ್ನು ಪ್ರದರ್ಶಿಸುತ್ತಿದ್ದಾನೆ. ತನ್ನ ಕೈಗಳ ಸಹಾಯವಿಲ್ಲದೆ ಬೈಸಿಕಲ್ ಅನ್ನು ಬ್ಯಾಲೆನ್ಸ್ ಮಾಡಲು ಪ್ರಯತ್ನಿಸಿದ್ದಾನೆ. ಜತೆಗೆ ಬೇರೆ ಬೇರೆ ರೀತಿಯ ಸಾಹಸ ಮಾಡಿರುವುದನ್ನು ನೋಡಬಹುದು.
ಜೀವನ ಪ್ರೀತಿ ಎಂದರೆ ಇದೇನೆ ಎಂದು ಹಲವರು ಕಮೆಂಟ್ ಮಾಡಿದ್ದು, ವೃದ್ಧನ ಸಾಹಸಕ್ಕೆ ಭಲೇ ಭಲೇ ಎಂದು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.