50-60 ವರ್ಷ ಆದ್ರೆ ಸಾಕು, ಜೀವನದಲ್ಲಿ ಎಲ್ಲಾನೂ ಮುಗಿದೇ ಹೋಯ್ತು ಅಂತ ಅಂದ್ಕೊಂಡು ಬಿಡ್ತಾರೆ. ಇನ್ನೂ ಕೆಲವರು ಕೈ-ಕಾಲು ನೋವು ಅ೦ತ ಆಸ್ಪತ್ರೆ ತಿರುಗಾಡೋದ್ರಲ್ಲಿ ಬ್ಯುಸಿ ಆಗಿಟ್ಟಿರ್ತಾರೆ. ಆದರೆ ಇಲ್ಲೊಬ್ಬ 80 ವರ್ಷದ ವೃದ್ಧೆ ಅನೇಕರಿಗೆ ಮಾದರಿಯಾಗಿದ್ದಾರೆ.
ಮ್ಯಾರಥಾನ್ ರೇಸ್ ಬಗ್ಗೆ ನಿಮಗೂ ಗೊತ್ತಿರ್ಬೇಕು. ಹಿರಿಯರು-ಕಿರಿಯರು ಎಲ್ಲರೂ ಈ ಓಟದಲ್ಲಿ ಭಾಗವಹಿಸುತ್ತಾರೆ. ಈ ಮೂಲಕ ಆರೋಗ್ಯದ ಬಗ್ಗೆ ಕಾಳಹಿ ವಹಿಸಲು ಜಾಗೃತಿ ಮೂಡಿಸುತ್ತಾರೆ. ಇತ್ತೀಚೆಗೆ ಟಾಟಾ ಮುಂಬೈ ಮಾರಥಾನ್ 2023 ನಡೆಯಿತು. ಇದರಲ್ಲಿ ಕಡಿಮೆ ಅಂದರೂ 55 ಸಾವಿರ ಹೆಚ್ಚು ಜನ ಭಾಗವಹಿಸಿದ್ದರು.
ಇದರಲ್ಲಿ ವಿಕಲಚೇತನರು ಸೇರಿದಂತೆ ಹಿರಿಯರು ಕೂಡಾ ಮ್ಯಾರಥಾನ್‌ನಲ್ಲಿ ಓಡಿ ಎಲ್ಲರ ಗಮನ ಸೆಳೆದಿದ್ದರು. ಅದರಲ್ಲಿ 80 ವರ್ಷದ ಭಾರತಿ ಓಡುವುದನ್ನ ನೋಡಿ ಎಲ್ಲರೂ ದಂಗಾಗಿದ್ದಾರೆ. ಅದರಲ್ಲೂ ಅವರು ಸೀರೆಯಲ್ಲೇ ಓಡಿದ್ದು ವಿಶೇಷವಾಗಿತ್ತು.
ಡಿಂಪಲ್ ಮೆಹ್ರಾ ತಮ್ಮ ಇನ್‌ಸ್ಟಾಗ್ರಾಮ್ ಅಕೌಂಟ್‌ನಲ್ಲಿ, ಭಾರತಿಯವರ ಓಟದ ವಿಡಿಯೋವನ್ನ ಪೋಸ್ಟ್ ಮಾಡಿದ್ದಾರೆ. ಡಿಂಪಲ್ ಮೆಹ್ರಾ ಇವರು ಭಾರತಿಯವರ ಮೊಮ್ಮಗಳು. ಸೀರೆ ಉಟ್ಟು, ಕೈಯಲ್ಲಿ ತ್ರಿವರ್ಣ ಧ್ವಜ ಹಿಡಿದುಕೊಂಡು, ಸುಮಾರು 51 ನಿಮಿಷದಲ್ಲಿ 80 ವರ್ಷದ ಭಾರತಿ ಸುಮಾರು 4.2 ಕಿಲೋಮೀಟರ್ ದೂರ ಓಡಿದ್ದರು. ಈ ವಿಡಿಯೋ ಕ್ಯಾಪ್ಶನ್ ನಲ್ಲಿ ‘ಈ ಭಾನುವಾರ ಟಾಟಾ ಮ್ಯಾರಥಾನ್‌ನಲ್ಲಿ 80 ವರ್ಷದ ನನ್ನ ಅಜ್ಜಿ ಭಾಗವಹಿಸಿದ್ದು, ಇದು ಧೈರ್ಯ ಮತ್ತು ದೃಡಸಂಕಲ್ಪಕ್ಕೆ ಸಾಕ್ಷಿಯಾಗಿದೆ’ ಎಂದು ಬರೆದಿದ್ದಾರೆ. ”ಈ ಹಿಂದೆ ನಾನು6 ಬಾರಿ ಮ್ಯಾರಥಾನ್‌ನಲ್ಲಿ ಭಾಗವಹಿಸಿದ್ದೇನೆ. ಅದಕ್ಕಾಗಿ ನಾನು ಪ್ರತಿನಿತ್ಯ ಅಭ್ಯಾಸ ಮಾಡುತ್ತೇನೆ.” ಎಂದು ಭಾರತೀಯವರು ಈ ವಯಸ್ಸಲೂ ತಾವು ಹೀಗೆ ಓಡ್ತಿರುವುದಕ್ಕೆ ಹೇಗೆ ಸಾಧ್ಯವಾಗಿದೆ ಅನ್ನೋದನ್ನ ಹೇಳಿದ್ದಾರೆ.
ಅಷ್ಟೆಅಲ್ಲ ”ನಾನು ಭಾರತೀಯಳು, ನನಗೆ ನನ್ನ ಸಂಸ್ಕೃತಿಯ ಬಗ್ಗೆ ಹೆಮ್ಮೆಯಿದೆ. ಆದ್ದರಿಂದಲೇ ನಾನು ಈ ಮ್ಯಾರಥಾನ್‌ನಲ್ಲಿ ಓಡ್ತಿರುವಾಗ ರಾಷ್ಟ್ರಧ್ವಜವನ್ನ ಹಿಡಿದುಕೊಂಡು ಓಡಿದ್ದೇನೆ. ವಯಸ್ಸು ಕೇವಲ ದೇಹಕ್ಕಾಗುತ್ತೆ ವಿನಃ ಮನಸ್ಸಿಗಲ್ಲ ಅ೦ತ ಭಾರತೀಯವರು, ಮ್ಯಾರಥಾನ್ ಓಡುವುದರ ಮೂಲಕ ಸಾಬೀತು ಪಡಿಸಿದ್ದಾರೆ.
https://www.youtube.com/watch?v=8kO9RyxV1B4&feature=youtu.be