ಕೊಡಗು: ಕೊಡಗು ಜಿಲ್ಲೆಯಾದ್ಯಂತ ನಿರಂತರ ಮಳೆ ಮುಂದುವರೆದಿದ್ದು, ವರುಣಾರ್ಭಟಕ್ಕೆ ರಾಮಹಳ್ಳಿ ಬೆಟ್ಟದಲ್ಲಿ ಜಲಸ್ಫೋಟವಾಗಿದೆ. ಬೆಟ್ಟದಿಂದ ಭಾರಿ ಮಣ್ಣುಮಿಶ್ರಿತ ನೀರು ಪ್ರವಾಹದಂತೆ ಬೋರ್ಗರೆದು ಬರುತ್ತಿದೆ.
ಮಡಿಕೇರಿ ತಾಲೂಕಿನ 2ನೇ ಮೊಣ್ಣಂಗೇರಿ ಗ್ರಾಮದಲ್ಲಿ ನಿನ್ನೆಯಷ್ಟೇ ಭಯಂಕರ ಶಬ್ಧದೊಂದಿಗೆ ಭೂಕುಸಿತವುಂಟಾಗಿತು. ಭೂಕುಸಿತಕ್ಕೆ ಸುಮಾರು 5 ಎಕರೆಯಷ್ಟು ಭೂಮಿ ಕೊಚ್ಚಿ ಹೋಗಿತ್ತು. ಇದೀಗ ಮಣ್ಣಂಗೇರಿ ಗ್ರಾಮದಲ್ಲಿ ಜಲಸ್ಫೋಟವಾಗಿದೆ.
ಮಣ್ಣಂಗೇರಿ ಗ್ರಾಮದ ರಾಮಹಳ್ಳ ಬೆಟ್ಟದಲ್ಲಿ ಭಾರಿ ಮಳೆಗೆ ಜಲಸ್ಫೋಟವಾಗಿದ್ದು, ಬೃಹತ್ ಬೆಟ್ಟದಲ್ಲಿ ಬಿರುಕು ಬಿಟ್ಟಿದೆ. ಬೆಟ್ಟದಿಂದ ಮಣ್ಣು ಮಿಶ್ರಿತ ನೀರು ಬೋರ್ಗರೆದು ಹರಿಯುತ್ತಿದ್ದು, ಗ್ರಾಮಸ್ಥರು ಭಯಭೀತರಾಗಿದ್ದಾರೆ.
ಗ್ರಾಮದಲ್ಲಿ 30 ಕುಟುಂಬಗಳು ವಾಸವಾಗಿದ್ದು, ಜೀವ ಭಯದಲ್ಲಿ ಕಾಲಕಳೆಯುತ್ತಿದ್ದಾರೆ. 2018ರಲ್ಲಿಯೂ ರಾಮಹಳ್ಳ ಬೆಟ್ಟದಲ್ಲಿ ಜಲಸ್ಫೋಟವುಂಟಾಗಿತ್ತು.