ಕಾರವಾರ : ಬೆಲೆ ಏರಿಕೆಯಿಂದ ರಾಜ್ಯದ ಜನರು ತತ್ತರಿಸಿದ್ದು,ತರಕಾರಿ ಬೆಲೆ ಏರಿಕೆ ಬೆನ್ನಲ್ಲೇ ಇದೀಗ ಮೀನುಗಳ ಬೆಲೆಯಲ್ಲೂ ಭಾರೀ ಏರಿಕೆಯಾಗಿದೆ.
ಹೌದು, ರಾಜ್ಯದಲ್ಲಿ ಮಳೆ ಕೊರತೆಯಿಂದಾಗಿ ತರಕಾರಿ ಬೆಳೆಗಳು ಕಡಿಮೆಯಾದ ಕಾರಣ ತರಕಾರಿ ಬೆಲೆಯಲ್ಲಿ ಹೆಚ್ಚಳವಾಗಿವೆ. ಇದೀಗ ಮೀನು ಪ್ರಿಯರಿಗೂ ಬೆಲೆ ಏರಿಕೆಯ ಶಾಕ್ ಎದುರಾಗಿದ್ದು, ಮಾರುಕಟ್ಟೆಯಲ್ಲಿ ತಾಜಾ ಮೀನುಗಳ ಬೆಲೆಯಲ್ಲಿ ಭಾರೀ ಏರಿಕೆಯಾಗಿದ್ದು, ಗ್ರಾಹಕರಿಗೆ ಬೆಲೆ ಏರಿಕೆಯ ಬಿಸಿ ತಟ್ಟಿದೆ.
ಅರಬ್ಬಿ ಸಮುದ್ರದಲ್ಲಿ ಅಲೆಗಳ ಅಬ್ಬರ ಹೆಚ್ಚಾಗಿರುವುದರಿಂದ ರಾಜ್ಯ ಸರ್ಕಾರವು ಯಾಂತ್ರೀಕೃತ ಮೀನುಗಾರಿಕೆ ಮತ್ತು ಸಂಪ್ರದಾಯಿಕ ಮೀನುಗಾರಿಕೆಗೆ ಜುಲೈ 1 ರಿಂದ 30 ರವರೆಎ ನಿಷೇಧ ಹೇರಿದೆ. ಈ ಹಿನ್ನೆಲೆಯಲ್ಲಿ ತಾಜಾ ಮೀನುಗಳ ಬೆಲೆಯಲ್ಲಿ ಹೆಚ್ಚಳವಾಗಿದೆ.
ಕೆಜಿಗೆ 150 ರೂ. ಇದ್ದ ಕೊಕ್ಕರೆ ಮೀನು ಈಗ 320 ರೂ. ಹೆಚ್ಚಳವಾಗಿದೆ. ಬಾಂಗಡೆ ಮೀನು 50 ರೂ ಇದ್ದದ್ದು, 80 ರೂ.ಗೆ ಏರಿಕೆಯಾಗಿದೆ. ಭೂತಾಯಿ ಮೀನು 100 ರೂ.ಗೆ ನಾಲ್ಕು, ಪಾಂಪ್ಲೆಟ್ ಕೆಜಿಗೆ 1,500 ರೂ.ಕೆಜಿಗೆ 400 ರೂ. ಇಸ್ವಾಣ ಕೆಜಿಗೆ 450 ರೂ.ಗೆ ಏರಿಕೆಯಾಗಿದೆ.