ವರ್ಷ ಮೂವತ್ತು ದಾಟಿತು ಎಂದರೆ ಸಾಕು ಮಹಿಳೆಯರಲ್ಲಿ ಒಂದು ರೀತಿ ಅಸ್ಥಿರತೆ, ಭಯ ಕಾಡುವುದಕ್ಕೆ ಶುರುವಾಗುತ್ತದೆ. ಮುಖದಲ್ಲಿ ಕಾಣುವ ನೆರಿಗೆಗಳು, ಹೆಚ್ಚುತ್ತಿರುವ ದೇಹ ತೂಕ ತಮ್ಮ ಸೌಂದರ್ಯದ ಕಡೆ ಹೆಚ್ಚು ಗಮನ ಹರಿಸುವುದಕ್ಕೆ ಆಗದೇ ಇರುವಂತದ್ದು ಹೀಗೆ ಏನೇನೋ ಒತ್ತಡಗಳು ಅವರನ್ನು ಕಾಡಲು ಶುರುವಾಗುತ್ತದೆ.
ಇದನ್ನೆಲ್ಲಾ ಹೇಗೆ ಎದುರಿಸಬಹುದು ಎಂಬುದಕ್ಕೆ ಇಲ್ಲೊಂದಿಷ್ಟು ಟಿಪ್ಸ್ ಇದೆ ನೋಡಿ.
ಮನೆ ಕೆಲಸ, ಆಫೀಸ್ ಕೆಲಸದ ನಡುವೆ ನಿಮಗೊಂದಿಷ್ಟು ಹೊತ್ತು ಸಮಯ ಮೀಸಲಿರಿಸಿ. ಅದನ್ನು ನಿಮ್ಮ ದೇಹದ ಕುರಿತು ಕಾಳಜಿ ವಹಿಸುವುದಕ್ಕೆಂದು ಇಟ್ಟುಕೊಳ್ಳಿ.
ತಿಂಗಳಿಗೊಮ್ಮೆ ಪಾರ್ಲರ್ ಗೆ ಹೋಗಿ. ಪಾರ್ಲರ್ ಗೆ ಹೋಗುವುದಕ್ಕೆ ಆಗದಿದ್ದರೆ ಮನೆಯಲ್ಲಿಯೇ ನಿಮ್ಮ ತ್ವಚೆಯ ಕಾಳಜಿ ವಹಿಸಿ.
ಇನ್ನು ಸ್ವಲ್ಪ ವ್ಯಾಯಾಮ, ವಾಕಿಂಗ್, ಒಳ್ಳೆಯ ಆಹಾರಗಳನ್ನು ಸೇವಿಸಿ. ಜೊತೆಗೆ ಮನಸ್ಸಿಗೆ ರಿಲ್ಯಾಕ್ಸ್ ಆಗುವಂತಹ ಹಾಡು, ಪುಸ್ತಕ ಓದುವ ಅಭ್ಯಾಸ ಬೆಳೆಸಿಕೊಳ್ಳಿ.
ಸಾಧ್ಯವಾದರೆ ಕುಟುಂಬದ ಜೊತೆ ಇಲ್ಲವೇ ಫ್ರೆಂಡ್ಸ್ ಜೊತೆ ಸಣ್ಣದೊಂದು ಟ್ರಿಪ್ ಗೆ ಹೋಗಿ. ಇದು ನಿಮ್ಮನ್ನು ಮತ್ತಷ್ಟೂ ಚೈತನ್ಯದಿಂದ ಇರಲು ಸಹಾಯ ಮಾಡುತ್ತದೆ.