ಬೆಂಗಳೂರು : ರಾಜ್ಯದಲ್ಲಿ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಸರ್ಕಾರ ನಮ್ಮ ಕಾರ್ಯಕರ್ತರ ಮೇಲೆ ಸುಳ್ಳು ಕೇಸ್ ಹಾಕಿ ಹತ್ತಿಕ್ಕುವ ಪ್ರಯತ್ನ ಮಾಡುತ್ತಿದೆ ಎಂದು ಬಿಜೆಪಿ ಟ್ವೀಟ್ ಮಾಡಿದೆ.
ಬಿಜೆಪಿ ಕಾರ್ಯಕರ್ತರ ಪಕ್ಷ, ಬಿಜೆಪಿಯ ಕಾರ್ಯಕರ್ತ ಎದೆಗುಂದುವವನಲ್ಲ. ರಾಷ್ಟ್ರಪರ ಕಾರ್ಯಗಳಲ್ಲಿ ಸಕ್ರಿಯರಾಗಿರುವ ನಮ್ಮ ಸಮಸ್ತ ಕಾರ್ಯಕರ್ತರ ಪರವಾಗಿ ಪಕ್ಷವೂ ಸದಾ ನಿಲ್ಲುತ್ತದೆ ಮತ್ತು ಅವಶ್ಯಕವಾದಲ್ಲಿ ಕಾನೂನಾತ್ಮಕವಾಗಿಯೂ ಹೋರಾಟ ನಡೆಸಲಿದೆ. ದೇಶ ವಿರೋಧಿಗಳ ವಿರುದ್ಧ, ನಾಡಿಗೆ ಕೇಡು ಬಗೆಯುವವರ ವಿರುದ್ಧ, ರಾಜ್ಯ ಸರಕಾರದ ಜನವಿರೋಧಿ ನಡೆಗಳ ವಿರುದ್ಧ, ಎದೆಗುಂದದೆ ಹೋರಾಡಿ ನಿಮ್ಮೊಂದಿಗೆ ಪಕ್ಷವಿದೆ, ಪಕ್ಷದಿಂದ ನಿಯೋಜನೆಗೊಂಡಿರುವ ಕಾನೂನು ತಜ್ಞರ ಸಮಿತಿ ಸದಾ ಸಿದ್ದವಿದೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಬಿಜೆಪಿ ಕಾರ್ಯಕರ್ತರ ಮೇಲೆ ದಬ್ಬಾಳಿಕೆ, ದೌರ್ಜನ್ಯ, ಭಯಭೀತಿ ಉಂಟು ಮಾಡುವ ಪ್ರಯತ್ನಗಳು ನಡೆಯುತ್ತಿವೆ ಎಂದು ಬಿಜೆಪಿ ಟ್ವೀಟ್ ಮೂಲಕ ವಾಗ್ಧಾಳಿ ನಡೆಸಿದೆ.
ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಬಿಜೆಪಿ ಕಾರ್ಯಕರ್ತರ ಮೇಲೆ ದಬ್ಬಾಳಿಕೆ, ದೌರ್ಜನ್ಯ, ಭಯಭೀತಿ ಉಂಟು ಮಾಡುವ ಪ್ರಯತ್ನಗಳು ನಡೆಯುತ್ತಿವೆ. ಇದಕ್ಕೆ ಬಿಜೆಪಿ ಕಾರ್ಯಕರ್ತರು ಹೆದರುವ ಅಗತ್ಯವಿಲ್ಲ. ನಕಲಿ ಕೇಸ್ ದಾಖಲು, ದೌರ್ಜನ್ಯ, ದಬ್ಬಾಳಿಕೆ ನಡೆದಲ್ಲಿ ಕಾನೂನು ಸಹಾಯವಾಣಿಗೆ ಕರೆ ಮಾಡಿ, ನೆರವು ಪಡೆಯಬಹುದು ಮತ್ತು ಕಾರ್ಯಕರ್ತರ ಬೆಂಬಲಕ್ಕೆ ಧಾವಿಸಲು ಕಾನೂನು ತಜ್ಞರ ತಂಡ ಸದಾ ಸಿದ್ಧವಾಗಿರುತ್ತದೆ ಎಂದು ಬಿಜೆಪಿ ಟ್ವೀಟ್ ಮಾಡಿದೆ.