ಬೆಂಗಳೂರು : ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಹಾಗೂ ಪವಿತ್ರಾ ಗೌಡ ಬಂಧನವಾಗಿದ್ದು, ಈ ಬೆನ್ನಲ್ಲೇ ಪವಿತ್ರಾ ಗೌಡ ಮಾಜಿ ಪತಿ ಸಂಜಯ್ ಸಿಂಗ್ ಪ್ರತ್ಯಕ್ಷವಾಗಿ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ.
ಪವಿತ್ರಾ ಗೌಡ ದರ್ಶನ್ ಸಂಪರ್ಕಕ್ಕೆ ಬರುವ ಮುನ್ನ ಸಂಜಯ್ ಸಿಂಗ್ ಪರಿಚಯ ಆಗಿದ್ದರು. ಸಂಜಯ್ ಸಿಂಗ್ ಅವರನ್ನು ಪ್ರೀತಿಸಿ ಪವಿತ್ರಾ ಮದುವೆ ಕೂಡ ಆಗಿದ್ದರು. ನಂತರ ಈ ದಂಪತಿಗೆ ಇಬ್ಬರು ಹೆಣ್ಣು ಮಗಳು ಕೂಡ ಜನಿಸಿದರು.
2002 ರಲ್ಲಿ ನಾನು ಬೆಂಗಳೂರಿಗೆ ಬಂದಾಗ ಪವಿತ್ರಾಗೌಡ ಪರಿಚಯ ಆಯಿತು. ನಂತರ ಪ್ರೀತಿಸಿ ಮದುವೆಯಾದೆವು. ಮದುವೆಯಾಗಿ 3 ವರ್ಷಕ್ಕೆ ಮಗಳು ಹುಟ್ಟಿದಳು. ಆಮೇಲೆ ಅವಳು ಸಿನಿಮಾ ಇಂಡಸ್ಟ್ರಿ ಸೇರಿದಳು. ನಂತರ ನಮ್ಮಿಬ್ಬರ ನಡುವೆ ಸಣ್ಣಪುಟ್ಟ ವಿಚಾರಕ್ಕೂ ಜಗಳ ನಡೆಯುತ್ತಿತ್ತು. ನಂತರ ಆಕೆ ಡಿವೋರ್ಸ್ ಕೇಳಿದರು. ನಾನು ಡಿವೋರ್ಸ್ ಕೊಟ್ಟೆ, ನಂತರ ಆಕೆ ದರ್ಶನ್ ಜೊತೆ ಜೀವನ ಮಾಡಲು ಶುರು ಮಾಡಿದಳು ಎಂದು ಸಂಜಯ್ ಸಿಂಗ್ ಹೇಳಿದ್ದಾರೆ.