ನವದೆಹಲಿ: ಟಿವಿ, ರೇಡಿಯೋದಲ್ಲಿಯೂ ಪ್ರಕೃತಿ ವಿಕೋಪ ಮನ್ಸೂಚನೆ ನೀಡಲಾಗುವುದು. ಶೀಘ್ರವೇ ಈ ವ್ಯವಸ್ಥೆಗೆ ಚಾಲನೆ ನೀಡಲಾಗುತ್ತದೆ ಎಂದು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧಿಕಾರಿಗಳು ಹೇಳಿದ್ದಾರೆ.
ಪ್ರಕೃತಿ ವಿಕೋಪದ ಕುರಿತ ಎಚ್ಚರಿಕೆಯ ಸಂದೇಶಗಳನ್ನು ಟಿವಿ ಸ್ಕ್ರೀನ್ ಗಳು ಮತ್ತು ರೇಡಿಯೋಗಳಲ್ಲಿ ಬಿತ್ತರಿಸುವ ಯೋಜನೆಗೆ ಶೀಘ್ರದಲ್ಲೇ ಚಾಲನೆ ನೀಡುವುದಾಗಿ ತಿಳಿಸಿದ್ದಾರೆ.
ಭಾರಿ ಮಳೆ, ಗುಡುಗು ಸಹಿತ ಮಳೆ, ಬಿರುಗಾಳಿ, ಬಿಸಿ ಗಾಳಿ ಮೊದಲಾದ ಹವಾಮಾನ ಬದಲಾವಣೆಯ ಕುರಿತಾಗಿ ಜನರಿಗೆ ಎಚ್ಚರಿಕೆ ಸಂದೇಶ ನೀಡುವ ಸಲುವಾಗಿ ಇತ್ತೀಚೆಗೆ ಮೊಬೈಲ್ ಸಂದೇಶಗಳನ್ನು ಕಳುಹಿಸುವ ಯೋಜನೆಗೆ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ ಚಾಲನೆ ನೀಡಿದೆ. ಇದರ ಮುಂದುವರೆದ ಭಾಗವಾಗಿ ಟಿವಿ ಮತ್ತು ರೇಡಿಯೋಗಳಲ್ಲಿ ಪ್ರಕೃತಿ ವಿಕೋಪ ಕುರಿತ ಎಚ್ಚರಿಕೆ ಸಂದೇಶಗಳನ್ನು ಬಿತ್ತರಿಸಲಾಗುತ್ತದೆ. ಪ್ರಾದೇಶಿಕ ಭಾಷೆಗಳು ಸೇರಿದಂತೆ ಎರಡು ಭಾಷೆಯಲ್ಲಿ ಸಂದೇಶ ಬಿತ್ತರಿಸಲಿದ್ದು, ವರ್ಷಾಂತ್ಯದೊಳಗೆ ಈ ವ್ಯವಸ್ಥೆ ಜಾರಿಗೆ ಬರಲಿದೆ ಎಂದು ಹೇಳಲಾಗಿದೆ.