alex Certify ಶಬ್ನಮ್ ನಂತ್ರ 3 ಮಹಿಳೆಯರು ಸೇರಿ 34 ಮಂದಿಗೆ ಗಲ್ಲು ಶಿಕ್ಷೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಶಬ್ನಮ್ ನಂತ್ರ 3 ಮಹಿಳೆಯರು ಸೇರಿ 34 ಮಂದಿಗೆ ಗಲ್ಲು ಶಿಕ್ಷೆ

ನಿರ್ಭಯಾ ಅತ್ಯಾಚಾರ ಪ್ರಕರಣದ ನಾಲ್ವರು ದೋಷಿಗಳಿಗೆ ಮರಣದಂಡನೆ ವಿಧಿಸಿದ ನಂತ್ರ ದೇಶದಲ್ಲಿ ಮತ್ತೆ ಗಲ್ಲಿಗೇರಿಸುವ ತಯಾರಿ ಶುರುವಾಗಿದೆ. ಹತ್ಯೆ ಪ್ರಕರಣ ಅಪರಾಧಿ ಶಬ್ನಮ್ ಶೀಘ್ರದಲ್ಲಿಯೇ ಗಲ್ಲಿಗೇರಲಿದ್ದಾಳೆ.

ಶಬ್ನಮ್ ನಂತ್ರದ ಪಟ್ಟಿ ಉದ್ದವಾಗಿದೆ. ಮೂರು ಮಹಿಳೆಯರು ಸೇರಿ 34 ಮಂದಿ ಗಲ್ಲಿಗೇರಲಿದ್ದಾರೆ. ಎಲ್ಲರ ಕ್ಷಮಾಪಣಾ ಅರ್ಜಿಯನ್ನು ರಾಷ್ಟ್ರಪತಿಗಳು ತಿರಸ್ಕರಿಸಿದ್ದಾರೆ.

ಮೂವರು ಮಹಿಳೆಯರು ಮತ್ತು 31 ಪುರುಷರ ಪಟ್ಟಿಯಲ್ಲಿ, ನಿಥಾರಿ ಹಗರಣದ ಆರೋಪಿ ಸುರೇಂದ್ರ ಕೋಲಿ ಸೇರಿದ್ದಾನೆ. 2014 ರಲ್ಲಿ ರಾಷ್ಟ್ರಪತಿಗಳು ಕೋಲಿಯ ಕ್ಷಮಾಪಣಾ ಅರ್ಜಿಯನ್ನು ತಿರಸ್ಕರಿಸಿದ್ದರು. ಕೋಲಿಯನ್ನು ಮೀರತ್ ಜೈಲಿನಲ್ಲಿ ಗಲ್ಲಿಗೇರಿಸುವ ಎಲ್ಲಾ ಸಿದ್ಧತೆಗಳು ಪೂರ್ಣಗೊಂಡಿದ್ದವು. ಆದರೆ ಕೋಲಿಯ ಮರಣದಂಡನೆಯನ್ನು ಕೊನೆಯ ಕ್ಷಣದಲ್ಲಿ ನಿಲ್ಲಿಸಲಾಗಿತ್ತು.

ನಿರ್ಭಯಾ ಅಪರಾಧಿಗಳಿಗಿಂತ ಮೊದಲು ಕಸಬ್, ಅಫ್ಜಲ್ ಮತ್ತು ಮೆಮನ್ ರನ್ನು ಗಲ್ಲಿಗೇರಿಸಲಾಗಿದೆ. ಮೂವರನ್ನು 2012, 2013 ಮತ್ತು 2015 ರಲ್ಲಿ ಗಲ್ಲಿಗೇರಿಸಲಾಗಿದೆ. ಸಂಸತ್ತಿನ ದಾಳಿಯಲ್ಲಿ ಅಫ್ಜಲ್ ಮತ್ತು ಕಸಬ್ ಭಾಗಿಯಾಗಿದ್ದರು. ಮುಂಬೈ ಸ್ಫೋಟದಲ್ಲಿ ಮೆಮನ್ ಭಾಗಿಯಾಗಿದ್ದ.

ಹರ್ಯಾಣದ ಸೋನಿಯಾ, ಮಹಾರಾಷ್ಟ್ರದ ರೇಣುಕಾ ಮತ್ತು ಸೀಮಾ ಗಲ್ಲಿಗೇರಲಿದ್ದಾರೆ. ಸೋನಿಯಾ, ಕುಟುಂಬಸ್ಥರ ಹತ್ಯೆ ಅಪರಾಧದ ಮೇಲೆ ಗಲ್ಲಿಗೇರುತ್ತಿದ್ದಾಳೆ. ಆಕೆ ತಂದೆ ಶಾಸಕರಾಗಿದ್ದರು. ಪತಿ ಸಂಜೀವ್ ಕೂಡ ಜೈಲಿನಲ್ಲಿದ್ದು, ಆತನಿಗೂ ಗಲ್ಲು ಶಿಕ್ಷೆಯಾಗಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...