alex Certify ದ್ವೇಷ ಭಾಷಣ ಪ್ರಕರಣದಲ್ಲಿ ವಾಗ್ದಂಡನೆ – ಯೂ ಟರ್ನ್‌ ಹೊಡೆದ ದೆಹಲಿ ಪೊಲೀಸ್‌ ! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ದ್ವೇಷ ಭಾಷಣ ಪ್ರಕರಣದಲ್ಲಿ ವಾಗ್ದಂಡನೆ – ಯೂ ಟರ್ನ್‌ ಹೊಡೆದ ದೆಹಲಿ ಪೊಲೀಸ್‌ !

ಕಳೆದ ವರ್ಷ ಡಿಸೆಂಬರ್‌ನಲ್ಲಿ ನಡೆದ ಧರ್ಮ ಸಂಸದ್‌ನಲ್ಲಿ ದ್ವೇಷ ಭಾಷಣ ಮಾಡಿದ್ದಾರೆ ಎಂದು ದಾಖಲಿಸಿದ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ನಿಂದ ಛೀಮಾರಿ ಹಾಕಿಸಿಕೊಂಡ ಕೆಲವೇ ದಿನಗಳಲ್ಲಿ, ದೆಹಲಿ ಪೊಲೀಸರು ಯೂ ಟರ್ನ್‌ ಹೊಡೆದಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿ ಎಫ್ಐಆರ್‌ ದಾಖಲಿಸಲು ಹಿಂದೇಟು ಹಾಕಿದ್ದರು.

ಇತ್ತೀಚೆಗೆ ಸಲ್ಲಿಸಿದ ತಾಜಾ ಅಫಿಡವಿಟ್‌ನಲ್ಲಿ, ದೂರಿನಲ್ಲಿ ಉಲ್ಲೇಖಿಸಿರುವ ಭಾಷಣಗಳ ಎಲ್ಲ ಲಿಂಕ್‌ಗಳು ಮತ್ತು ಇತರ ಅಂಶಗಳನ್ನು ವಿಶ್ಲೇಷಿಸಲಾಗಿದೆ. ಕಾರ್ಯಕ್ರಮದ ಒಂದು ವಿಡಿಯೊ ರೆಕಾರ್ಡಿಂಗ್ ಯೂಟೂಬ್‌ನಲ್ಲಿ ಕಂಡುಬಂದಿದೆ. ಹೆಚ್ಚಿನ ಪರಿಶೀಲನೆಯ ನಂತರ, ಐಪಿಸಿಯ ಸೆಕ್ಷನ್ 153 ಎ, 295 ಎ, 298 ಮತ್ತು 34 ರ ಅಡಿಯಲ್ಲಿ ಎಫ್‌ಐಆರ್ ಅನ್ನು ಓಖ್ಲಾ ಇಂಡಸ್ಟ್ರಿಯಲ್ ಏರಿಯಾ ಪೊಲೀಸ್ ಠಾಣೆಯಲ್ಲಿ ಮೇ 4 ರಂದು ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

BIG NEWS: ಸಿಎಂ ಭೇಟಿಯಾದ ಅಲ್ಪಸಂಖ್ಯಾತರ ನಿಯೋಗ; ಆಜಾನ್ ವಿವಾದಕ್ಕೆ ನಿಯಮ ರೂಪಿಸಲು ಮನವಿ

ಆದರೆ, ಕೋರ್ಟ್‌ಗೆ ಈ ಹಿಂದೆ ದೆಹಲಿ ಪೊಲೀಸರು ಸಲ್ಲಿಸಿದ್ದ ಅಫಿಡವಿಟ್‌ನಲ್ಲಿ, ವಸ್ತು ಸ್ಥಿತಿ, ಸಾಕ್ಷ್ಯಗಳನ್ನು ಪರಿಶೀಲಿಸಿದ ನಂತರ ಈ ವಿಷಯದಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ. ಇದಕ್ಕೂ ಮುನ್ನ ಇದಕ್ಕಾಗಿ ಯಾವುದೇ ಪ್ರಕರಣ ದಾಖಲಿಸಿಲ್ಲ. “ಜನಾಂಗೀಯ ಶುದ್ಧೀಕರಣವನ್ನು ಸಾಧಿಸಲು ‘ಮುಸ್ಲಿಮರ ನರಮೇಧಕ್ಕೆ ಮುಕ್ತ ಕರೆ’ ಅಥವಾ ಭಾಷಣದಲ್ಲಿ ಇಡೀ ಸಮುದಾಯದ ಹತ್ಯೆಗೆ ಮುಕ್ತ ಕರೆ ಎಂದು ಅರ್ಥೈಸುವ ಅಥವಾ ಅರ್ಥೈಸಬಹುದಾದ ಪದಗಳ ಬಳಕೆ ಆಗಿಲ್ಲ. ಧರ್ಮ ಸಂಸದ್‌ನಲ್ಲಿ ದ್ವೇಷಪೂರಿತ ಭಾಷಣದ ಕುರಿತು ದೂರುಗಳನ್ನು ಮುಕ್ತಾಯಗೊಳಿಸಿದ್ದೇವೆ. ವಿಡಿಯೊ ಕ್ಲಿಪ್‌ಗಳನ್ನು ಮೌಲ್ಯಮಾಪನ ಮಾಡಿದ ನಂತರ, ಅವುಗಳಲ್ಲಿ ನಿರ್ದಿಷ್ಟ ಸಮುದಾಯದ ವಿರುದ್ಧ ಯಾವುದೇ ದ್ವೇಷದ ಪದಗಳಿಲ್ಲ ಎಂಬ ಉಲ್ಲೇಖವಿದೆ.

“ಯಾವುದೇ ಉನ್ನತ ಅಧಿಕಾರಿ ಇದನ್ನು ಪರಿಶೀಲಿಸಿದ್ದಾರೆಯೇ? ಅವರು ಕೇವಲ ವಿಚಾರಣೆಯ ವರದಿಯನ್ನು ಪುನರುತ್ಪಾದಿಸಿದ್ದಾರೆಯೇ ಅಥವಾ ಅವರ ಮನಸ್ಸನ್ನು ಅನ್ವಯಿಸಿದ್ದಾರೆಯೇ?…. ಇದು ನಿಮ್ಮ ನಿಲುವು ಕೂಡ ಆಗಿದೆಯೇ…. ಸಬ್ ಇನ್ಸ್‌ಪೆಕ್ಟರ್ ಮಟ್ಟದ ಅಧಿಕಾರಿಯ ವಿಚಾರಣಾ ವರದಿಯ ಪುನರುತ್ಪಾದನೆ ಮಾತ್ರವೇ? ” ಎಂದು ಹೆಚ್ಚುವರಿ ಸಾಲಿಸಿಟರ್ ಜನರಲ್ ಕೆ ಎಂ ನಟರಾಜ್ ಅವರನ್ನು ಏಪ್ರಿಲ್ 22ರಂದು ನ್ಯಾಯಾಲಯ ಕೇಳಿತ್ತು.

ಪತ್ರಕರ್ತ ಕುರ್ಬಾನ್ ಅಲಿ ಮತ್ತು ಪಟನಾ ಹೈಕೋರ್ಟ್ ಮಾಜಿ ನ್ಯಾಯಾಧೀಶೆ ಅಂಜನಾ ಪ್ರಕಾಶ್ ಪರ ವಾದ ಮಂಡಿಸಿದ ಹಿರಿಯ ವಕೀಲ ಕಪಿಲ್ ಸಿಬಲ್ ಅವರು ದೆಹಲಿ ಪೊಲೀಸರ ನಿಲುವನ್ನು ಪ್ರಶ್ನಿಸಿದ್ದರು. ಆಗ ಕಾನೂನು ಅಧಿಕಾರಿ “ಉತ್ತಮ ಅಫಿಡವಿಟ್” ಸಲ್ಲಿಸಲು ಒಪ್ಪಿಕೊಂಡಿದ್ದರು. ಉತ್ತರಾಖಂಡ, ಹಿಮಾಚಲ ಪ್ರದೇಶ ಮತ್ತು ದೆಹಲಿ ರಾಜ್ಯಗಳಲ್ಲಿ ಆಯೋಜಿಸಲಾದ ಧಾರ್ಮಿಕ ಕಾರ್ಯಕ್ರಮಗಳಲ್ಲಿ ದ್ವೇಷಪೂರಿತ ಭಾಷಣ ಮಾಡುವವರ ವಿರುದ್ಧ ಕ್ರಮ ಜರುಗಿಸಲು ನಿರ್ದೇಶನದ ಮನವಿಯನ್ನು ನ್ಯಾಯಾಲಯವು ಪರಿಶೀಲಿಸುತ್ತಿದೆ. ಈ ಪ್ರಕರಣದ ಮುಂದಿನ ವಿಚಾರಣೆ ಮೇ 9ಕ್ಕೆ ನಿಗದಿಯಾಗಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...