alex Certify ಗುಸ್ಸಿಯ ಈ ’ತೂತುಬಿದ್ದ’ ಶೂ ರೇಟೆಷ್ಟು ಗೊತ್ತಾ….? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಗುಸ್ಸಿಯ ಈ ’ತೂತುಬಿದ್ದ’ ಶೂ ರೇಟೆಷ್ಟು ಗೊತ್ತಾ….?

ಎರಡು ಲಕ್ಷ ರೂ.ಗಳ ’ಕುರ್ತಾ’ ಮೂಲಕ ನೆಟ್ಟಿಗರಿಂದ ಭಾರೀ ಪ್ರತಿಕ್ರಿಯೆ ಪಡೆದುಕೊಂಡ ಇಟಲಿಯ ಫ್ಯಾಶನ್ ಬ್ರಾಂಡ್ ಗುಸ್ಸಿ ಇದೀಗ ತೂತಿನ ವಿನ್ಯಾಸವಿರುವ ಶೂಗಳನ್ನು ಪರಿಚಯಿಸಿದೆ.

ರಬ್ಬರ್‌ನಿಂದ ಉತ್ಪಾದಿಸಿರುವ ಈ ಶೂಗಳು ಜನಪ್ರಿಯ ಬ್ರಾಂಡ್ ’ಕ್ರಾಕ್ಸ್‌’ನ ಪಾದರಕ್ಷೆಯ ಡಿಸೈನ್‌ನಂತೆಯೇ ಕಾಣುತ್ತವೆ. $420 (30,660 ರೂಪಾಯಿಗಳು) ಮೌಲ್ಯದ ಈ ಶೂಗಳು ಹೆಂಗಸರ ಮಾಡೆಲ್‌ಗಳಿಗಾದರೆ $470 (34,000 ರೂಪಾಯಿಗಳು) ಬೆಲೆ ಬಾಳುತ್ತವೆ.

ಈ ಸ್ಲಿಪ್‌-ಅನ್ ಸ್ಯಾಂಡಲ್‌ಗಳನ್ನು ಮೂರು ವಿವಿಧ ಬಣ್ಣಗಳಲ್ಲಿ ಲಾಂಚ್ ಮಾಡಲಾಗಿದೆ. ಪುರುಷರಿಗೆ ಕೆಂಪು, ಹಸಿರು ಹಾಗೂ ನೀಲಿ ಬಣ್ಣದ ಆಯ್ಕೆಗಳಿದ್ದು, ಮಹಿಳೆಯರ ಶೂಗಳು ಬಿಳಿ, ಕಪ್ಪು ಹಾಗೂ ಲೈಲಾಕ್ ಬಣ್ಣಗಳಲ್ಲಿ ಲಭ್ಯವಿರಲಿವೆ.

ಜಿಜಿ ಲೋಗೋದೊಂದಿಗೆ ಬರುವ ಈ ಶೂಗಳು ಇದೀಗ ಅಂತರ್ಜಾಲದಲ್ಲಿ ಸಖತ್‌ ಸದ್ದು ಮಾಡುತ್ತಿವೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...