ನವದೆಹಲಿ: ಕೊರೋನಾ ಲಸಿಕೆಯ ತುರ್ತು ಬಳಕೆಗೆ ಫಿಜರ್ ಅನುಮತಿ ಕೋರಿದ ಬೆನ್ನಲ್ಲೇ ಪುಣೆಯ ಸೀರಂ ಇನ್ ಸ್ಟಿಟ್ಯೂಟ್ ಆಫ್ ಇಂಡಿಯಾ ವತಿಯಿಂದ ಭಾರತದಲ್ಲಿ ಬಳಕೆಗೆ ಅನುಮತಿ ನೀಡಲು ಕೋರಲಾಗಿದೆ.
ಬ್ರಿಟನ್ ಮೂಲದ ಆಕ್ಸ್ ಫರ್ಡ್ ವಿವಿ, ಆಸ್ಟ್ರಾಜೆನಿಕಾ ಕಂಪನಿ ಸಹಯೋಗದಲ್ಲಿ ಸೀರಂ ಇನ್ ಸ್ಟಿಟ್ಯೂಟ್ ಆಫ್ ಇಂಡಿಯಾ ಅಭಿವೃದ್ಧಿಪಡಿಸಿದ ಕೋವಿಶೀಲ್ಡ್ ಕೊರೋನಾ ಲಸಿಕೆ ಭಾರತದಲ್ಲಿ ಉತ್ಪಾದಿಸಲಾಗುತ್ತಿದ್ದು, ತುರ್ತು ಬಳಕೆಗೆ ಅನುಮತಿ ನೀಡುವಂತೆ ಕೋರಲಾಗಿದೆ.
ಬ್ರಿಟನ್ ನಲ್ಲಿ ಲಸಿಕೆಯ ತುರ್ತು ಬಳಕೆಗೆ ಫಿಜರ್ ಸಂಸ್ಥೆಗೆ ಅನುಮತಿ ನೀಡಲಾಗಿದೆ. ಭಾರತದಲ್ಲಿ ಕೂಡ ಅನುಮತಿ ನೀಡುವಂತೆ ಫಿಜರ್ ಸಂಸ್ಥೆ ವತಿಯಿಂದ ಡ್ರಗ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾಗೆ ಮನವಿ ಮಾಡಲಾಗಿದೆ. ಇದರ ಬೆನ್ನಲ್ಲೇ ಸೀರಂ ಇನ್ ಸ್ಟಿಟ್ಯೂಟ್ ಆಫ್ ಇಂಡಿಯಾ ಕೂಡ ಲಸಿಕೆಯ ತುರ್ತು ಬಳಕೆಗೆ ಅನುಮತಿ ಕೋರಿದೆ.