
ಟ್ವಿಟರ್ ಸಿಇಓ ಸ್ಥಾನದಿಂದ ಸಹ-ಸ್ಥಾಪಕ ಜಾಕ್ ಡೋರ್ಸೆ ಕೆಳಗಿಳಿಯುತ್ತಲೇ ಆ ಸ್ಥಾನ ಅಲಂಕರಿಸಿರುವ ಪರಾಗ್ ಇದೀಗ ಜಾಗತಿಕವಾಗಿ ಸುದ್ದಿಯಲ್ಲಿದ್ದಾರೆ. ಯುವ ಸಿಇಓಗೆ ಶುಭಾಶಯಗಳ ಸುರಿಮಳೆಯೇ ಹರಿದುಬರತೊಡಗಿದ್ದು, ಟೆಸ್ಲಾ ಮತ್ತು ಸ್ಪೇಸ್‌ಎಕ್ಸ್ ಸ್ಥಾಪಕ ಎಲಾನ್ ಮಸ್ಕ್ ಸಹ ತಮ್ಮ ಹಾರೈಕೆಗಳನ್ನು ಕಳುಹಿಸಿದ್ದಾರೆ.
ಭಾರತದ ಪ್ರತಿಭೆಗಳಿಂದ ಅಮೆರಿಕಕ್ಕೆ ಭಾರೀ ಅನುಕೂಲವಾಗುತ್ತಿದೆ ಎಂದ ಮಸ್ಕ್, ಮೈಕ್ರೋಸಾಫ್ಟ್, ಗೂಗಲ್, ಹಾಗೂ ಐಬಿಎಂನಂಥ ದೊಡ್ಡ ಕಂಪನಿಗಳಿಗೆ ಭಾರತೀಯರು ಹೇಗೆ ಬಾಸ್‌ಗಳಾಗಿದ್ದಾರೆ ಎಂದು ತಿಳಿಸಿದ್ದಾರೆ.
ಸುಲಭವಾಗಿ ಮಾಡಿ ʼರಾಗಿʼ ಸೂಪ್
“ಗೂಗಲ್, ಮೈಕ್ರೋಸಾಫ್ಟ್, ಅಡೋಬ್, ಐಬಿಎಂ, ಪಾಲೋ ಆಲ್ಟೋ ನೆಟ್ವರ್ಕ್‌ಗಳು ಹಾಗೂ ಈಗ ಟ್ವಿಟರ್ ಅನ್ನು ಸಿಇಓಗಳಾಗಿ ಭಾರತದಲ್ಲಿ ಬೆಳೆದು ಬಂದ ಮಂದಿ ಮುನ್ನಡೆಸುತ್ತಿದ್ದಾರೆ. ತಂತ್ರಜ್ಞಾನ ಲೋಕದಲ್ಲಿ ಭಾರತೀಯರ ಅದ್ಭುತ ಯಶಸ್ಸನ್ನು ನೋಡುವುದು ಬಹಳ ಖುಷಿಯಾಗುತ್ತದೆ ಹಾಗೂ ವಲಸೆಗಾರರಿಗೆ ಅಮೆರಿಕ ಕೊಡಮಾಡುವ ಅವಕಾಶಗಳ ಪ್ರತೀಕ ಇದಾಗಿದೆ. (ಕಂಗ್ರಾಟ್ಸ್, ಪರಾಗ್ ಅಗರ್ವಾಲ್),” ಎಂದು ಸ್ಟ್ರೈಪ್ ಸಿಇಓ ಪ್ಯಾಟ್ರಿಕ್ ಕಾಲ್ಲಿಸನ್ ಟ್ವೀಟ್ ಮಾಡಿದ್ದಾರೆ.
ಇದೇ ಟ್ವೀಟ್‌ಗೆ, “ಭಾರತೀಯ ಪ್ರತಿಭೆಗಳಿಂದ ಅಮೆರಿಕಕ್ಕೆ ದೊಡ್ಡ ಪ್ರಯೋಜನವಿದೆ,” ಎಂದು ಕೋಟ್ ಹಾಕಿ ರೀಟ್ವೀಟ್ ಮಾಡಿದ್ದಾರೆ ಮಸ್ಕ್.