ಓಮಿಕ್ರಾನ್ ಕಾಟದಿಂದ ಆರಂಭಗೊಂಡ ಕೋವಿಡ್ ಸೋಂಕಿನ ಮೂರನೇ ಅಲೆಯ ಕಿರಿಕಿರಿಯಿಂದ ನಿಧಾನವಾಗಿ ಆಚೆ ಬರುತ್ತಿರುವ ಜನರಿಗೆ ಈಗ ಸೋಂಕಿನ ಮತ್ತೊಂದು ಅವತಾರದ ಸುದ್ದಿ ಬಂದು ಅಪ್ಪಳಿಸಿದೆ.
ಹೊಸ ಬಣ್ಣಗಳ ಆಯ್ಕೆಯಲ್ಲಿ ಹೈನೆಸ್ ಸಿಬಿ 350 ಮತ್ತು ಸಿಬಿ 350ಆರ್ಎಸ್
ತಜ್ಞರ ಪ್ರಕಾರ, ಕೋವಿಡ್-19ನ ಹೊಸ ಅವತಾರವು ಡೆಲ್ಟಾ ಹಾಗೂ ಓಮಿಕ್ರಾನ್ ರೂಪಾಂತರಿಗಳ ಅಡ್ಡತಳಿಯಾಗಿದೆ. ಇದನ್ನು ’ಡೆಲ್ಟಾಕ್ರಾನ್’ ರೂಪಾಂತರಿ ಎಂದು ಕರೆಯಲಾಗುತ್ತಿದೆ. ಈ ರೂಪಾಂತರಿ ಇದುವರೆಗೂ ಅನೇಕ ದೇಶಗಳಲ್ಲಿ ಕಂಡು ಬಂದಿದೆ ಎಂದು ತಜ್ಞರು ಹೇಳುತ್ತಾರೆ.
ಪಂಚರಾಜ್ಯ ಚುನಾವಣೆಯಲ್ಲಿ ಶಿವಸೇನೆ ಕಳಪೆ ಪ್ರದರ್ಶನ: ನೋಟಾಗಿಂತಲೂ ಕಡಿಮೆ ಮತ ಪಡೆದ ಸೇನೆ….!
ಡೆನ್ಮಾರ್ಕ್, ಫ್ರಾನ್ಸ್ ಹಾಗೂ ನೆದರ್ಲೆಂಡ್ಸ್ನಲ್ಲಿ ಡೆಲ್ಟಾಕ್ರಾನ್ ಅವತಾರಿ ವೈರಾಣುಗಳು ಕಂಡು ಬಂದಿವೆ ಎಂದು ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿದೆ. ಅಮೆರಿಕದಲ್ಲೂ ಸಹ ಈ ರೂಪಾಂತರಿ ಕಾಣಿಸಿಕೊಂಡಿದೆ ಎಂದು ಆರೋಗ್ಯ ಸಂಬಂಧಿ ನಿಯತಕಾಲಿಕೆಯೊಂದು ತಿಳಿಸಿದೆ.
ಈ ಡೆಲ್ಟಾಕ್ರಾನ್ ರೂಪಾಂತರಿಯು ಕೋವಿಡ್ನ ಇತರೆ ರೂಪಾಂತರಿಗಳಂತೆ ಎಲ್ಲೆಡೆ ವ್ಯಾಪಿಸುವುದಿಲ್ಲ ಹಾಗೂ ಆತಂಕ ಪಡಬೇಕಾದ ಅಗತ್ಯವಿಲ್ಲ ಎಂದು ಸಂಶೋಧಕರು ತಿಳಿಸಿದ್ದಾರೆ.