ಪಾನ್ ಕಾರ್ಡ್ ಮಹತ್ವದ ದಾಖಲೆ. 10 ಅಂಕಿಗಳ ಅತ್ಯಂತ ಪ್ರಮುಖ ದಾಖಲೆಯಾಗಿದ್ದು, ಆದಾಯ ತೆರಿಗೆ ಇಲಾಖೆ ಇದನ್ನು ನೀಡುತ್ತದೆ. ಬ್ಯಾಂಕಿನ ಕೆಲಸ ಸೇರಿದಂತೆ ಅನೇಕ ಕೆಲಸಗಳಿಗೆ ಪಾನ್ ಕಾರ್ಡನ್ನು ದಾಖಲೆ ರೂಪದಲ್ಲಿ ನೀಡಲಾಗುತ್ತದೆ.
ಯಾವುದೇ ವ್ಯಕ್ತಿ ಪಾನ್ ಕಾರ್ಡ್ ನ್ನು ಐಡಿ ಪುರಾವೆಯಾಗಿ ಬಳಸಬಹುದು. ಮದುವೆಯಾದ್ಮೇಲೆ ಪಾನ್ ಕಾರ್ಡ್ ನಲ್ಲಿರುವ ಹೆಸರು ಬದಲಿಸಬೇಕಾಗುತ್ತದೆ. ಉಪ ನಾಮ ಹಾಗೂ ವಿಳಾಸವನ್ನು ಮನೆಯಲ್ಲೇ ಕುಳಿತು ನೀವು ಬದಲಿಸಬಹುದು. ಮೊದಲು https://www.onlineservices.nsdl.com/paam/endUserRegisterContact.html ಲಿಂಕ್‌ಗೆ ಹೋಗಬೇಕು. ಅಲ್ಲಿ ಅರ್ಜಿಯನ್ನು ಭರ್ತಿ ಮಾಡಬೇಕು. ಎಲ್ಲ ಅಗತ್ಯ ದಾಖಲೆಗಳನ್ನು ಭರ್ತಿ ಮಾಡಿದ ನಂತ್ರ ಆನ್ಲೈನ್ ನಲ್ಲಿ ಸಲ್ಲಿಸಬೇಕು. ಬದಲಾಗುವ ದಾಖಲೆಗಳನ್ನು ಪರಿಶೀಲಿಸಿದ ನಂತ್ರ ಸಲ್ಲಿಸು ಆಯ್ಕೆ ಮೇಲೆ ಕ್ಲಿಕ್ ಮಾಡಬೇಕು.
ಶಾಲಾ ಮಕ್ಕಳಿಗೆ ಮುಖ್ಯ ಮಾಹಿತಿ: ಈ ವರ್ಷ ಒಂದೇ ಜತೆ ಸಮವಸ್ತ್ರ…?
ಫಾರ್ಮ್ ಭರ್ತಿ ಮಾಡಿದ ನಂತರ ಶುಲ್ಕ ಪಾವತಿ ಮಾಡಬೇಕು. ಆನ್‌ಲೈನ್ ನೆಟ್ ಬ್ಯಾಂಕಿಂಗ್ ಮೂಲಕ ಅಥವಾ ಡೆಬಿಟ್, ಕ್ರೆಡಿಟ್ ಅಥವಾ ಕ್ಯಾಶ್ ಕಾರ್ಡ್ ಮೂಲಕ ಶುಲ್ಕ ಪಾವತಿ ಮಾಡಬೇಕು. ಭಾರತದಲ್ಲಿರುವ ವಿಳಾಸ ಬದಲಿಸಲು 110 ರೂಪಾಯಿ ಮತ್ತು ಭಾರತದ ಹೊರಗಿನ ವಿಳಾಸ ಬದಲಿಸಲು 1020 ರೂಪಾಯಿ ಪಾವತಿಸಬೇಕಾಗುತ್ತದೆ.
ಪಾವತಿಯನ್ನು ಮಾಡಿದ ನಂತರ ಪಾನ್ ಅರ್ಜಿ ನಮೂನೆಯನ್ನು ಡೌನ್‌ಲೋಡ್ ಮಾಡಬೇಕು. ಅದನ್ನು ಭರ್ತಿ ಮಾಡಬೇಕು. ಇದರ ನಂತರ ಈ ಫಾರ್ಮ್‌ನ ಹಾರ್ಡ್ ನಕಲನ್ನು ಪ್ರಿಂಟ್‌ಔಟ್ ಮೂಲಕ ತೆಗೆದುಕೊಳ್ಳಬಹುದು. ಎರಡು ಪಾಸ್‌ಪೋರ್ಟ್ ಅಳತೆಯ ಭಾವಚಿತ್ರಗಳನ್ನು ಫಾರ್ಮ್‌ನಲ್ಲಿ ಅಂಟಿಸಿ ಮತ್ತು ಅದರ ಮೇಲೆ ಸಹಿ ಮಾಡಬೇಕು.
ಆದಾಯ ತೆರಿಗೆ ಪಾನ್ ಸೇವೆಗಳ ಕೇಂದ್ರಕ್ಕೆ ಅರ್ಜಿಯನ್ನು ಕಳುಹಿಸಬೇಕು. ಫಾರ್ಮ್ ಜೊತೆಗೆ ಅಗತ್ಯ ದಾಖಲೆಗಳನ್ನು ಕಳುಹಿಸಬೇಕಾಗುತ್ತದೆ. ಅರ್ಜಿ ನಮೂನೆಯೊಂದಿಗೆ ಅಗತ್ಯ ದಾಖಲೆಗಳನ್ನು ಸ್ವಯಂ ದೃಢೀಕರಿಸಬೇಕು.