
ಪುರುಷರ ಗುಂಪೊಂದು ವ್ಯಕ್ತಿಯನ್ನು ಮನವೊಲಿಸಿ ಲಸಿಕಾ ಕೇಂದ್ರದತ್ತ ಕರೆತರುತ್ತಾರೆ. ಆದರೆ ಆತ ಲಸಿಕಾ ಕೇಂದ್ರದ ಮೆಟ್ಟಿಲು ಹತ್ತಲು ಕೇಳುವುದೇ ಇಲ್ಲ. ಒತ್ತಾಯಪೂರ್ವಕವಾಗಿ ಆತನ ಸ್ನೇಹಿತರು ಲಸಿಕೆ ಹಾಕಿಸಿಕೊಳ್ಳುವಂತೆ ತಳ್ಳುವ ದೃಶ್ಯ ವಿಡಿಯೋದಲ್ಲಿ ಕಾಣಬಹುದು.
ಮಧ್ಯಪ್ರದೇಶದ ಬುಂದೇಲ್‌ಖಂಡ್‌ನಲ್ಲಿರುವ ಲಸಿಕೆ ಕೇಂದ್ರದಲ್ಲಿ ಈ ಘಟನೆ ನಡೆದಿದೆ. 1.20 ನಿಮಿಷಗಳಿರುವ ವಿಡಿಯೋದಲ್ಲಿ ವ್ಯಕ್ತಿಯನ್ನು 4-5 ಜನ ಸ್ನೇಹಿತರು ಸೇರಿ ತಳ್ಳಿದ್ರೂ ಆತ ಲಸಿಕೆ ಪಡೆಯುವುದನ್ನು ವಿರೋಧಿಸಿದ್ದಾನೆ. ಕೊನೆಗೆ ಆತನನ್ನು ಕೆಳಕ್ಕೆ ಬೀಳಿಸಿ ಗಟ್ಟಿಯಾಗಿ ಹಿಡಿದಿಕೊಂಡಿದ್ದಾರೆ. ಈ ವೇಳೆ ಸಿಬ್ಬಂದಿ ಬಂದು ಆತನಿಗೆ ಲಸಿಕೆ ನೀಡಿದ್ದಾರೆ.
ಈ ವಿಡಿಯೋವನ್ನು ಅನಿಲ್ ದುಬೆ ಎಂಬ ಪತ್ರಕರ್ತ ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದು, “ಲಸಿಕೆ ಪಡೆಯುವುದು ಹೇಗೆ, ಯಾರಿಗಾದರೂ ಲಸಿಕೆ ಹಾಕಿಸುವುದು ಕಷ್ಟದ ಕೆಲಸ” ಎಂದು ಶೀರ್ಷಿಕೆ ನೀಡಿದ್ದಾರೆ. ಸದ್ಯ ಈ ವಿಡಿಯೋ ಭಾರಿ ವೈರಲ್ ಆಗಿದೆ.