ಮೆಲ್ಬೋರ್ನ್: ನೆಟ್ಸ್ ನಲ್ಲಿ ಅಭ್ಯಾಸ ಮಾಡುವಾಗ ಚೆಂಡು ಬಡಿದು ಭಾರತ ಕ್ರಿಕೆಟ್ ತಂಡದ ಆರಂಭಿಕ ಆಟಗಾರ ಕೆ.ಎಲ್. ರಾಹುಲ್ ಕೈಗೆ ಪೆಟ್ಟಾಗಿದೆ.
ಅವರಿಗೆ ತಂಡದ ಫಿಸಿಯೋ ಪ್ರಥಮ ಚಿಕಿತ್ಸೆ ನೀಡಿದ್ದಾರೆ. ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿ ಕೆ.ಎಲ್. ರಾಹುಲ್ ಅಭ್ಯಾಸ ಮಾಡುತ್ತಿದ್ದ ಸಂದರ್ಭದಲ್ಲಿ ಬಲಗೈಗೆ ಚೆಂಡು ಬಡಿದು ಅವರು ನೋವು ಅನುಭವಿಸಿದ್ದಾರೆ. ಡಿಸೆಂಬರ್ 26 ರಿಂದ ಬಾರ್ಡರ್ –ಗವಾಸ್ಕರ್ ಟ್ರೋಫಿ ಟೆಸ್ಟ್ ಕ್ರಿಕೆಟ್ ಸರಣಿಯ ನಾಲ್ಕನೇ ಪಂದ್ಯ ನಡೆಯಲಿದೆ. ಆಸ್ಟ್ರೇಲಿಯಾ- ಭಾರತ ನಡುವಿನ ಈ ಸರಣಿ 1-1ರಲ್ಲಿ ಸಮಬಲವಾಗಿದ್ದು, ಕಳೆದ ಪಂದ್ಯದಲ್ಲಿ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿದ ಕೆ.ಎಲ್. ರಾಹುಲ್ ಅವರ ಕೈಗೆ ಪೆಟ್ಟಾಗಿದೆ. ಗಾಯದ ಬಗ್ಗೆ ಇನ್ನೂ ಸ್ಪಷ್ಟವಾಗಿ ಗೊತ್ತಾಗಿಲ್ಲ. ಚಿಕಿತ್ಸೆ ಪಡೆದಿದ್ದಾರೆ ಎನ್ನಲಾಗಿದೆ.
ಇದೇ ಕ್ರಿಕೆಟ್ ಗ್ರೌಂಡ್‌ನಲ್ಲಿ ನಡೆಯಲಿರುವ ನಾಲ್ಕನೇ ಟೆಸ್ಟ್ ಪಂದ್ಯದ ಮೊದಲು ಭಾನುವಾರದಂದು ನೆಟ್ ಸೆಷನ್‌ನಲ್ಲಿ ಭಾರತದ ನಾಯಕ ರೋಹಿತ್ ಶರ್ಮಾ ಅವರ ಎಡ ಮೊಣಕಾಲಿಗೆ ಪೆಟ್ಟಾಯಿತು. ರೋಹಿತ್ ಅವರು ಥ್ರೋಡೌನ್ ಸ್ಪೆಷಲಿಸ್ಟ್ ಅನ್ನು ಎದುರಿಸುತ್ತಿರುವಾಗ ಗಾಯಗೊಂಡರು.
ಭಾರತ ಎಂಸಿಜಿಯಲ್ಲಿ 14 ಟೆಸ್ಟ್ ಗಳಲ್ಲಿ 8 ರಲ್ಲಿ ಸೋತಿದೆ ಮತ್ತು 4 ರಲ್ಲಿ ಗೆಲುವು ದಾಖಲಿಸಿದೆ. ಎರಡು ಪಂದ್ಯಗಳು ಡ್ರಾದಲ್ಲಿ ಕೊನೆಗೊಂಡಿವೆ.