
ಜನವರಿ 19 ರಂದು ಎರ್ನಾಕುಲಂ ಕಾನೂನು ಕಾಲೇಜಿನಲ್ಲಿ ತಂಕಮ್ ಚಿತ್ರ ಪ್ರಚಾರದ ವೀಡಿಯೊ ವೈರಲ್ ಆದ ನಂತರ ನಟಿ ಅಪರ್ಣಾ ಬಾಲಮುರಳಿ ಭಾರೀ ಸುದ್ದಿಯಲ್ಲಿದ್ದರು. ವಿದ್ಯಾರ್ಥಿಯೊಬ್ಬ ವೇದಿಕೆಯ ಮೇಲೆ ಅವರೊಂದಿಗೆ ಅನುಚಿತವಾಗಿ ವರ್ತಿಸಿ ನಟಿಗೆ ಹತ್ತಿರವಾಗಲು ಯತ್ನಿಸಿದ. ಈ ವೇಳೆ ನಟಿ ಅಪರ್ಣಾ ದೂರ ಸರಿದು ಮುಜುಗರಕ್ಕೀಡಾದಂತೆ ಕಾಣುತ್ತಿದ್ದರು.
ಈ ವಿಡಿಯೋ ವೈರಲ್ ಆಗಿತ್ತು ಇದೀಗ ಕಾನೂನು ಕಾಲೇಜು ಯೂನಿಯನ್ ಘಟನೆ ಬಗ್ಗೆ ಕ್ಷಮೆ ಯಾಚಿಸಿದೆ ಮತ್ತು ಅವರು ಇದನ್ನು ಗಂಭೀರ ಸಮಸ್ಯೆ ಎಂದು ಪರಿಗಣಿಸುವುದಾಗಿ ತಿಳಿಸಿದೆ. ಅಪರ್ಣಾ ಬಾಲಮುರಳಿ ಮತ್ತು ವಿನೀತ್ ಶ್ರೀನಿವಾಸನ್ ತಮ್ಮ ಮುಂಬರುವ ಚಿತ್ರ ʼತಂಕಮ್ʼ ಪ್ರಚಾರಕ್ಕಾಗಿ ಎರ್ನಾಕುಲಂ ಕಾನೂನು ಕಾಲೇಜಿಗೆ ಭೇಟಿ ನೀಡಿದ್ದರು.